ಪಟ್ನಾ: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ಅವರಿಗೆ ಶಿಕ್ಷೆಯಾಗಿರುವ ಬಗ್ಗೆ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಲಾಲು ಅವರು ಬಿಹಾರ ರಾಜಕೀಯದಲ್ಲಿ ಅಪ್ರಸ್ತುತ ಎಂದೂ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಸುಶೀಲ್, 'ಈ ಪ್ರಕರಣ (ಮೇವು ಹಗರಣ) ಬೆಳಕಿಗೆ ತಂದವರು ನಾವೇ. ಸಿಬಿಐ ತನಿಖೆಗೆ ಆಗ್ರಹಿಸಿ ಪಟ್ನಾ ಹೈಕೋರ್ಟ್ಗೆ ಮನವಿ ಮಾಡಿದ್ದೆವು. ಬಿಹಾರವನ್ನು ಲೂಟಿ ಮಾಡಿದವರು ಶಿಕ್ಷೆ ಅನುಭವಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಲಾಲು ಯಾದವ್ ಅವರು ಬಿಹಾರದ ರಾಜಕೀಯದಲ್ಲಿ ಪ್ರಸ್ತುತವಾಗಿ ಉಳಿದಿಲ್ಲ' ಎಂದಿದ್ದಾರೆ.

ಮೇವು ಹಗರಣಕ್ಕೆ ಸಂಬಂಧಿಸಿದ ಡೊರಂಡ ಖಜಾನೆ ಪ್ರಕರಣದಲ್ಲಿ ಲಾಲು ಪ್ರಸಾದ್ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ಇದನ್ನೂ ಓದಿ:ಮೇವು ಹಗರಣ | ಡೊರಂಡ ಖಜಾನೆ ಪ್ರಕರಣದಲ್ಲಿ ಲಾಲು ದೋಷಿ: ಸಿಬಿಐ ಕೋರ್ಟ್ ತೀರ್ಪು

ಪ್ರಕರಣದ ವಿಚಾರಣೆಯನ್ನು ಜ. 29ರಂದೇ ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಫೆ. 15ಕ್ಕೆ ನಿಗದಿ ಮಾಡಿತ್ತು.ಶಿಕ್ಷೆ ಪ್ರಮಾಣವನ್ನು ಫೆ. 18ರಂದು ಪ್ರಕಟಿಸಲಿದೆ.

ಈ ಪ್ರಕರಣದ ಇತರ 36 ಮಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಲಾಗಿದೆ. ಲಾಲೂ ಅವರ ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ತಿಳಿಸಬೇಕಾಗಿದೆ ಎಂದು ಡೊರಂಡ ಖಜಾನೆ ಪ್ರಕರಣದ ಪ್ರತಿವಾದಿ ವಕೀಲ ಸಂಜಯ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.