ಚೆನ್ನೈ (ಪಿಟಿಐ): ಕಾನೂನುಬದ್ಧವಲ್ಲದ ವಿವಾಹದ ಯಾವುದೇ ದೀರ್ಘ ಸಹಬಾಳ್ವೆ ಅಥವಾ ಸಹ ಜೀವನ ನಡೆಸುವ ಕಕ್ಷಿದಾರರಿಗೆ ಕೌಟುಂಬಿಕ ನ್ಯಾಯಾಲಯದಲ್ಲಿ ವೈವಾಹಿಕ ವಿವಾದದ ಮೊಕದ್ದಮೆ ಹೂಡುವ ಕಾನೂನು ಹಕ್ಕು ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

ಕೊಯಮತ್ತೂರಿನ ಆರ್. ಕಲೈಸೆಲ್ವಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳವಾರ ವಜಾಗೊಳಿಸಿ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ಆರ್. ವಿಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಕಲೈಸೆಲ್ವಿ ಅವರು ವಿಚ್ಛೇದನ ಕಾಯ್ದೆ 1869ರ ಸೆಕ್ಷನ್ 32ರ ಅಡಿ ವೈವಾಹಿಕ ಹಕ್ಕುಗಳನ್ನು ಪಡೆಯಲು ಕೊಯಮತ್ತೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಕೌಟುಂಬಿಕ ನ್ಯಾಯಾಲಯವು 2019ರ ಫೆಬ್ರುವರಿ 14 ರಂದು ಅವರ ಮನವಿಯನ್ನು ತಿರಸ್ಕರಿಸಿತ್ತು. ನಂತರ ಅವರುಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

‘ಕಾನೂನುಬದ್ಧವಾಗಿ ವಿವಾಹ ನೆರವೇರದಿದ್ದಾಗ ಅವರು ದೀರ್ಘ ಮತ್ತು ನಿರಂತರವಾಗಿ ಒಟ್ಟಿಗೆ ಇದ್ದರೂ ಅವರಿಗೆ ವೈವಾಹಿಕ ಹಕ್ಕುಗಳಿಗಾಗಿ ಕಕ್ಷಿದಾರರು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲುಯಾವುದೇ ಕಾನೂನು ಹಕ್ಕು ಇದುವುದಿಲ್ಲ’ ಎಂದು ಪೀಠವು ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.