ಎಲ್ಲರೂ ಮತ ಚಲಾಯಿಸಿ. ದೇಶದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಅದು. ಮುಂದಿನ ಐದು ವರ್ಷಕ್ಕೆ ಇದು ಪ್ರಮುಖ ದಿನ. ನಾನು ರಾಜಕೀಯವಾಗಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲಅಲ್ಲು ಅರ್ಜುನ್, ನಟ
ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮತದಾನ
–ಪಿಟಿಐ ಚಿತ್ರ
ಲೋಕಸಭೆ ಚುನಾವಣೆಯ 4 ನೇ ಹಂತದಲ್ಲಿ, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ಯುವ ಮತದಾರರು ಹಾಗೂ ಮಹಿಳಾ ಮತದಾರರು ಮತ ಪ್ರಮಾಣ ಏರಿಕೆಗೆ ಶಕ್ತಿ ತುಂಬಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ಬನ್ನಿ, ನಾವೆಲ್ಲರೂ ನಮ್ಮ ಕರ್ತವ್ಯವನ್ನು ಮಾಡೋಣ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸೋಣನರೇಂದ್ರ ಮೋದಿ, ಪ್ರಧಾನಿ
ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್ ನಜೀರ್, ಪತ್ನಿ ಸಮೀರಾ ನಜೀರ್ ವಿಜಯವಾಡದಲ್ಲಿ ಮತದಾನ ಮಾಡಿದರು
– ಚಿತ್ರ: ಎಕ್ಸ್
ಅಧೀರ್ ರಂಜನ್ ಚೌಧರಿ
–ಪಿಟಿಐ ಚಿತ್ರ
ನಾವು ಗೆಲ್ಲುವುದದಲ್ಲಿ ಯಾವುದೇ ಸಂದೇಹವಿಲ್ಲ. ಈ ಬಗ್ಗೆ ನನಗೆ ವಿಶ್ವಾಸವಿದೆ. ಸುಮಾರು 4-5 ಸ್ಥಳಗಳಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿವೆ. ನಾನು ಬಿಜೆಪಿ ಮತ್ತು ಟಿಎಂಸಿ ವಿರುದ್ಧ ಸ್ಪರ್ಧಿಸುತ್ತಿದ್ದೇನೆ. ಯಾರೂ ಇಲ್ಲಿಂದ ಟಿಎಂಸಿಯ ಯೂಸುಫ್ ಪಠಾಣ್ ಅವರನ್ನು ಆಯ್ಕೆ ಮಾಡಬಾರದು. ಅದು ನಿಷ್ಪ್ರಯೋಜಕವಾಗಿದೆ.ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ಸಂಸದ ಹಾಗೂ ಬೆಹ್ರಾಂಪುರ ಅಭ್ಯರ್ಥಿ
ಚುನಾವಣೆಯಲ್ಲಿ ಹಿಂಸಾಚಾರವಿಲ್ಲ. ಎಲ್ಲವೂ ಸುಗಮವಾಗಿದೆ ಎಂದು ಅವರು ಹೇಳುವುದು ಬೇಸರದ ಸಂಗತಿ. ನಮ್ಮ ಪಕ್ಷದ ಕಾರ್ಯಕರ್ತರನ್ನು 2 ದಿನಗಳಿಂದ ಕೂಡಿ ಹಾಕಲಾಗಿದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವರನ್ನು ನಾನು ಕೇಳಲು ಬಯಸುತ್ತೇನೆ.. ನಮ್ಮ ಕಾರ್ಯಕರ್ತರನ್ನು ಏಕೆ ಕೂಡಿ ಹಾಕಲಾಗಿದೆ? ಸೋಲಿನ ಭಯವೇ?ಫಾರೂಕ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ
ಸಿಕಂದರಾಬಾದ್‌ನ ಕಾಚೆಗುಡದಲ್ಲಿ ಕೇಂದ್ರ ಸಚಿವ ಕಿಶನ್ ಕುಮಾರ್ ರೆಡ್ಡಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು.
– ಪಿಟಿಐ
400 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಕನೌಜ್‌ನಿಂದ ಅಖಿಲೇಶ್ ಯಾದವ್, ಮೈನ್‌ಪುರಿಯಿಂದ ಡಿಂಪಲ್ ಯಾದವ್, ರಾಯ್‌ಬರೇಲಿ ಮತ್ತು ವಯನಾಡ್‌ನಲ್ಲಿ ರಾಹುಲ್ ಗಾಂಧಿ ಮತ್ತು ಹೈದರಾಬಾದ್‌ನಿಂದ ಓವೈಸಿ - ಇವರೆಲ್ಲರೂ ಚುನಾವಣೆಯಲ್ಲಿ ಸೋಲಲಿದ್ದಾರೆ.ಸಾಕ್ಷಿ ಮಹಾರಾಜ್, ಉನ್ನಾವ್ ಬಿಜೆಪಿ ಅಭ್ಯರ್ಥಿ