ಚಂಡೀಗಢ: ಪಂಜಾಬ್‌ನ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ಅಭ್ಯರ್ಥಿಗಳನ್ನು ಘೋಷಿಸಿದೆ.

ಜಲಂಧರ್ ಮೀಸಲು ಕ್ಷೇತ್ರದಿಂದ ಮಾಜಿ ಶಾಸಕ ಪವನ್ ಕುಮಾರ್ ಟಿನು ಅವರನ್ನು ಕಣಕ್ಕಿಳಿಸಿದ್ದು, ಜೊತೆಗೆ ಮೂವರು ಹಾಲಿ ಶಾಸಕರಿಗೆ ಪಕ್ಷ ಟಿಕೆಟ್ ನೀಡಿದೆ.

ಫಿರೋಜ್‌ಪುರದಿಂದ ಜಗದೀಪ್ ಸಿಂಗ್ ಕಾಕಾ ಬ್ರಾರ್, ಗುರುದಾಸಪುರದಿಂದ ಅಮನ್‌ಶೇರ್ ಸಿಂಗ್ ಕಲ್ಸಿ ಮತ್ತು ಲುಧಿಯಾನದಿಂದ ಅಶೋಕ್ ಪರಾಶರ್ ಪಪ್ಪಿ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಜಗದೀಪ್ ಸಿಂಗ್ ಮುಕ್ತಸರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರೆ, ಅಮನ್‌ಶೇರ್ ಬಟಾಲಾ ಕ್ಷೇತ್ರದ ಶಾಸಕರಾಗಿದ್ದಾರೆ. ಇನ್ನು ಅಶೋಕ್ ಪರಾಶರ್ ಲೂಧಿಯಾನ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಟಿನು ಇತ್ತೀಚೆಗಷ್ಟೇ ಶಿರೋಮಣಿ ಅಕಾಲಿ ದಳವನ್ನು ತೊರೆದು ಎಎಪಿ ಸೇರಿದ್ದರು.

ಈ ಘೋಷಣೆಯೊಂದಿಗೆ ಎಎಪಿ ಪಂಜಾಬ್‌ನ ಎಲ್ಲಾ 13 ಸಂಸದೀಯ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ವಿರೋಧ ಪಕ್ಷಗಳ ಕೂಟ 'ಇಂಡಿಯಾ'ದ ಭಾಗವಾಗಿರುವ ಎಎಪಿ ಪಂಜಾಬ್‌ನಲ್ಲಿ ಸ್ವಂತವಾಗಿ ಸ್ಪರ್ಧಿಸುತ್ತಿದೆ.

ಪಂಜಾಬ್‌ನ 13 ಲೋಕಸಭಾ ಸ್ಥಾನಗಳಿಗೆ ಜೂನ್ 1 ರಂದು ಕೊನೆಯ ಹಂತದಲ್ಲಿ ಮತದಾನ ನಡೆಯಲಿದೆ.
.ಛತ್ತೀಸಗಢ ವಿಧಾನಸಭೆ ಚುನಾವಣೆ: 11 ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕಟಿಸಿದ ಎಎಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.