ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಸ್ಪೀಕರ್ ಚುನಾವಣೆ ಜೂನ್ 26ಕ್ಕೆ; ಒಂದು ದಿನ ಮುಂಚೆಯೇ ಬೆಂಬಲ ಪತ್ರ

Published 13 ಜೂನ್ 2024, 16:29 IST
Last Updated 13 ಜೂನ್ 2024, 16:29 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯ ನೂತನ ಸ್ಪೀಕರ್ ಆಯ್ಕೆಯು ಜೂನ್ 26ರಂದು ನಡೆಯಲಿದೆ. ಅಭ್ಯರ್ಥಿಯನ್ನು ಬೆಂಬಲಿಸುವ ಪತ್ರವನ್ನು ಜೂನ್ 25ರ ಮಧ್ಯಾಹ್ನ 12ರೊಳಗೆ ಸಲ್ಲಿಸಬೇಕು ಎಂದು ಲೋಕಸಭಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

18ನೇ ಲೋಕಸಭೆಯ ಮೊದಲ ಸಭೆ ಜೂನ್ 24ರಿಂದ ಆರಂಭಗೊಳ್ಳಲಿದೆ. ಈ ಅಧಿವೇಶನವು ಜಲೈ 3ಕ್ಕೆ ಕೊನೆಗೊಳ್ಳಲಿದೆ.

ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸಿದವರ ಪರವಾಗಿ ಬೆಂಬಲ ವ್ಯಕ್ತಪಡಿಸುವವರು ಚುನಾವಣೆ ನಡೆಯುವ ದಿನ ಮಧ್ಯಾಹ್ನ 12ರೊಳಗೆ ಸೆಕ್ರೇಟರಿ ಜನರಲ್‌ಗೆ ಲಿಖಿತ ರೂಪದಲ್ಲಿ ನೀಡುವುದು ವಾಡಿಕೆ. ಆದರೆ ಈ ಬಾರಿ ಒಂದು ದಿನ ಮುಂಚಿತವಾಗಿ, ಅಂದರೆ ಜೂನ್ 25ರಂದು ಮಧ್ಯಾಹ್ನ 12ರೊಳಗೆ ನೀಡಬೇಕು ಎಂದು ತಿಳಿಸಲಾಗಿದೆ.

‘ಜೂನ್ 24 ಹಾಗೂ 25ರಂದು ನೂತನ ಸಂಸದರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಸ್ಪೀಕರ್ ಆಯ್ಕೆ 26ರಂದು ನಡೆಯಲಿದೆ. ಜೂನ್ 27ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆ ಹಾಗೂ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT