ಮುಂಬೈ: ನಮೀಬಿಯಾದಿಂದ ತಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾದಚೀತಾಗಳೇ ದೇಶದಲ್ಲಿಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಲಂಪಿ ವೈರಸ್ (ಚರ್ಮ ಗಂಟು) ರೋಗಕ್ಕೆ ಕಾರಣ ಎಂದುಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಸೋಮವಾರಹೇಳಿದ್ದಾರೆ. ಅವರ ಹೇಳಿಕೆ ಒಂದೆಡೆ ರಾಜಕೀಯ ನಾಯಕರ ಟೀಕೆಗೆ ಗುರಿಯಾಗಿದ್ದರೆ ಮತ್ತೊಂದೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯಕ್ಕೀಡಾಗಿದೆ.

ಲಂಪಿ ವೈರಸ್ ರೋಗವು ಮಹಾರಾಷ್ಟ್ರ ಸೇರಿದಂತೆ ದೇಶದಾದ್ಯಂತ ಸಾವಿರಾರು ಜಾನುವಾರುಗಳ ಸಾವಿಗೆ ಕಾರಣವಾಗಿದೆ.

ಮಹಾರಾಷ್ಟ್ರದ ಭಂಡಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಟೋಲೆ, 'ರೈತರನ್ನು ನಾಶಮಾಡಲು ಮೊಟ್ಟಮೊದಲ ಬಾರಿಗೆ ಲಂಪಿ ವೈರಸ್‌ನಂತಹ ರೋಗಗಳನ್ನು ಭಾರತಕ್ಕೆ ತರಲಾಯಿತು. ನೈಜೀರಿಯಾದಿಂದ ಲಂಪಿ ವೈರಸ್ ರೋಗ ಹರಡುತ್ತಿದೆ. ನಾವು ನೈಜೀರಿಯಾದಿಂದ ಚಿರತೆಗಳನ್ನು ತಂದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು (ಸೆಪ್ಟೆಂಬರ್ 17)ಇದಕ್ಕಾಗಿಕಾರ್ಯಕ್ರಮವನ್ನೇ ಆಯೋಜಿಸಲಾಗಿತ್ತು' ಎಂದು ಅವರು ಹೇಳಿದರು.

ಪಟೋಲೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 'ಚೀತಾಗಳನ್ನು ನಮೀಬಿಯಾದಿಂದ ತರಲಾಗಿದೆಯೇ ಹೊರತು ನೈಜೀರಿಯಾದಿಂದಲ್ಲ' ಎಂದು ಟ್ವೀಟ್ ಮಾಡಿದ್ದಾರೆ. ಪೋಸ್ಟ್ ಅನ್ನು ಪಟೋಲೆಅವರಿಗೆ ಟ್ಯಾಗ್ ಮಾಡಿದ್ದಾರೆ.

'ಚೀತಾಗಳನ್ನು ಭಾರತಕ್ಕೆ ತರುವುದರಿಂದ ಬಡತನ, ನಿರುದ್ಯೋಗ, ಹಣದುಬ್ಬರ ಕೊನೆಗೊಳ್ಳುತ್ತದೆಯೇ.ಚೀತಾಗಳನ್ನು ತರುವುದರಿಂದ ರೈತರು ಮತ್ತು ದೇಶದ ಗಡಿಗಳು ಸುರಕ್ಷಿತವಾಗಿರಬಹುದೇ? ಆದರೆ ಚೀತಾಗಳನ್ನು ಭಾರತಕ್ಕೆ ತರುವ ಮೂಲಕವಿದೇಶಿ ರೋಗವನ್ನುತರಲಾಗಿದೆ. ಹಸುಗಳು ಮತ್ತು ಎತ್ತುಗಳು ಹಿಂದೆಂದೂ ಇಂತಹ ಕಾಯಿಲೆಯಿಂದ ಸತ್ತಿರಲಿಲ್ಲ. ರೈತರನ್ನು ನಾಶಮಾಡಲು ಮೊದಲ ಬಾರಿಗೆ ಇಂತಹ ರೋಗಗಳನ್ನು ಭಾರತಕ್ಕೆತರಲಾಯಿತು' ಎಂದು ಪಟೋಲೆ ಆರೋಪಿಸಿದ್ದಾರೆ.

ರೈತರಿಗೆ ಈಗ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಿಜವಾದ ಮುಖಗೊತ್ತಾಗಿದೆ ಎಂದು ಅವರು ಹೇಳಿದರು.

ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ವಿಶೇಷ ವಿಮಾನದ ಮೂಲಕ ಎಂಟುಚೀತಾಗಳನ್ನು ದೇಶಕ್ಕೆ ತರಲಾಯಿತು.ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿ ಅವರು ಅವುಗಳನ್ನು ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.