ಮುಂಬೈ: ‘ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಸಂಸದ ಅರವಿಂದ ಸಾವಂತ್ ನೀಡಿರುವ ‘ಹೊರಗಿನ ಮಾಲು’ ಹೇಳಿಕೆಯನ್ನು ಸಂಜಯ್ ರಾವುತ್ ಅವರು ಸಮರ್ಥಿಸಿಕೊಂಡಿರುವ ಬಗ್ಗೆ ಮಹಾ ವಿಕಾಸ್ ಅಘಾಡಿ (ಎಂವಿಎ) ನಾಯಕರು ಮೌನವಹಿಸಿರುವುದೇಕೆ’ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಅಭ್ಯರ್ಥಿ ಶಾಯಿನಾ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅರವಿಂದ ಸಾವಂತ್ ಅವರು ವಿವಾದಾತ್ಮಕ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದಾರೆ. ಆದರೆ, ಸಂಜಯ್ ರಾವುತ್ ‘ಕ್ಷುಲ್ಲಕ’ ವಿಷಯವೆಂದು ತಳ್ಳಿಹಾಕಿದ್ದಾರೆ. ಅವರ ನಡವಳಿಕೆಯನ್ನು ನೋಡಿದರೆ ಉದ್ಧವ್ ಠಾಕ್ರೆ ಬಣದ ನಾಯಕರಿಗೆ ಮಹಿಳೆಯರ ಬಗ್ಗೆ ನಿಜವಾಗಿಯೂ ಗೌರವ ಇದೆಯೇ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮಹಾ ವಿಕಾಸ್ ಅಘಾಡಿಯ ಮಹಿಳಾ ನಾಯಕರು ಏಕೆ ಮೌನವಾಗಿದ್ದಾರೆ? ಅವರ ಪಿತೃಪ್ರಧಾನ ಮನಸ್ಥಿತಿ ಯಾವಾಗ ಕೊನೆಗೊಳ್ಳುತ್ತದೆ? ಎಂದು ಟೀಕಿಸಿದ್ದಾರೆ.

‘ನಾನು ಇಪ್ಪತ್ತು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಅರವಿಂದ ಸಾವಂತ್ ಅವರು ಪ್ರಚಾರಕ್ಕೆ ನನ್ನನ್ನು ಆಹ್ವಾನಿಸಿದ್ದರು. ಆಗ ನಾನು ‘ಆತ್ಮೀಯ ಸಹೋದರಿ’ಯಾಗಿದ್ದೆ. ಈಗ ಇದ್ದಕ್ಕಿದ್ದಂತೆ ‘ಹೊರಗಿನ ಮಾಲು’ ಆಗಿದ್ದೇನೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸಾವಂತ್ ಹೇಳಿಕೆ ಖಂಡಿಸಿ ಶಿಂದೆ ಬಣದ ಶಿವಸೇನಾದ ಮಹಿಳಾ ಘಟಕವು ನಾಗಪಾಡಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಇದರ ಆಧಾರದಲ್ಲಿ ಭಾರತ ನ್ಯಾಯ ಸಂಹಿತೆಯ ಸೆಕ್ಷನ್ 79 ಮತ್ತು 356 (2)ರ ಅಡಿಯಲ್ಲಿ ಪೊಲೀಸರು ಸಾವಂತ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಹೇಳಿಕೆ ವಿವಾದ ಸ್ವರೂಪ ಪಡೆಯುತ್ತಿದ್ದಂತೆಯೇ ಕ್ಷಮೆಯಾಚಿಸಿರುವ ಸಾವಂತ್, ‘ಶಾಯಿನಾ ಅವರು ಈ ವಿಚಾರವನ್ನು ಇಟ್ಟುಕೊಂಡು ಕಥೆ ಕಟ್ಟಲು ಬಯಸುತ್ತಿದ್ದಾರೆ. ನಾನು ಏನು ಹೇಳಿದ್ದೇನೋ, ಅದನ್ನು ಪೂರ್ಣವಾಗಿ ತೋರಿಸಿ. ಅವರು ಆ ವಿಧಾನಸಭಾ ಕ್ಷೇತ್ರದಲ್ಲಿ ನೆಲಸಿಲ್ಲ. ನನ್ನ 55 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಮಹಿಳೆಯ ಘನತೆಗೆ ಯಾವತ್ತೂ ಕುಂದು ತಂದಿಲ್ಲ. ಯಾವಾಗಲೂ ಅವರನ್ನು ಗೌರವಿಸಿದ್ದೇನೆ’ ಎಂದು ಹೇಳಿದ್ದರು.

‘ನನ್ನನ್ನು ಉದ್ದೇಶಪೂರ್ವಕವಾಗಿ ಗುರಿಪಡಿಸಲಾಗುತ್ತಿದೆ. ಇದರಿಂದ ತೀವ್ರ ನಿರಾಸೆಗೊಂಡಿದ್ದೇನೆ. ಒಂದು ವೇಳೆ ನಾನು ಯಾರನ್ನಾದರೂ ನೋಯಿಸಿದ್ದರೆ, ಕ್ಷಮಿಸಿ’ ಎಂದು ವಿನಂತಿಸಿಕೊಂಡಿದ್ದರು.

ಸಾವಂತ್ ಹೇಳಿಕೆ ಸಮರ್ಥಿಸಿಕೊಂಡ ರಾವುತ್

‘ಶಾಯಿನಾ ಅವರನ್ನು ಉಲ್ಲೇಖಿಸುವುದರಲ್ಲಿ ಯಾವುದೇ ಅವಮಾನವಿಲ್ಲ. ಸ್ಥಳೀಯರಲ್ಲದ ಕಾರಣ ಅವರನ್ನು ‘ಹೊರಗಿನವರು’ ಎಂದು ಕರೆಯಲಾಗಿದೆ. ಬಿಜೆಪಿ ನಾಯಕರು ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಬಗ್ಗೆ ಮಾಡಿದ ಟೀಕೆಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕು. ಇತಿಹಾಸವನ್ನು ಮರುಪರಿಶೀಲಿಸುವುದು ಮುಖ್ಯ. ಹೊರಗಿನವರು ಚುನಾವಣೆಗೆ ಸ್ಪರ್ಧಿಸಿದಾಗ ಮತದಾರರು ಅಭ್ಯರ್ಥಿಯ ಮೂಲದ ಬಗ್ಗೆ ಚರ್ಚೆ ನಡೆಸುತ್ತಾರೆ. ಈ ವಿಚಾರದಲ್ಲಿ ವಿವಾದ ಸೃಷ್ಟಿಸುವುದು ಅನಗತ್ಯ’ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಹೇಳಿದ್ದರು.

ಸಾವಂತ್ ಹೇಳಿಕೆಗೆ ಶಿಂದೆ ಕಿಡಿ

‘ಬಾಳಾಸಾಹೇಬ್ ಠಾಕ್ರೆ ಬದುಕಿದ್ದರೆ, ಅವರು ಆರವಿಂದ ಸಾವಂತ್ ಕಪಾಳಕ್ಕೆ ಹೊಡೆಯುತ್ತಿದ್ದರು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ವಾಗ್ದಾಳಿ ನಡೆಸಿದ್ದಾರೆ.
.ಶಿಂದೆ ಬಣದ ಅಭ್ಯರ್ಥಿ ಶಾಯಿನಾ ಕುರಿತ ‘ಮಾಲು’ ಹೇಳಿಕೆ: ಸಂಸದ ಸಾವಂತ್ ವಿರುದ್ಧ FIR.ಶಾಯಿನಾ ಕುರಿತ ‘ಹೊರಗಿನ ಮಾಲು’ ಹೇಳಿಕೆ ವಿವಾದ: ಸಂಸದ ಸಾವಂತ್ ಕ್ಷಮೆಯಾಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.