ಭೋಪಾಲ್: ಮೊಬೈಲ್ ಆ್ಯಪ್ ಬಳಸಿ ತನ್ನ ಧ್ವನಿಯನ್ನು ಮಹಿಳೆಯರ ರೀತಿಯಲ್ಲಿ ಬದಲಾಯಿಸಿಕೊಂಡು ಕಾಲೇಜು ಯುವತಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಯುವಕನೊಬ್ಬನನ್ನು ಮಧ್ಯಪ್ರದೇಶದ ಸಿಧ್ದಿ ಜಿಲ್ಲೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತನನ್ನು ಹಾಲು ಮಾರುವ ಬ್ರಿಜೇಶ್ ಕುಶ್ವಾಹಾ ಎಂದು ಗುರುತಿಸಲಾಗಿದ್ದು ಆತನ ಕೃತ್ಯಕ್ಕೆ ಸಹಕರಿಸಿದ್ದ ಇನ್ನೂ ಇಬ್ಬರು ಯುವಕರನ್ನು ಬಂಧಿಸಲಾಗಿದೆ.

ಸಿದ್ಧಿ ಜಿಲ್ಲೆಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ಬುಡಕಟ್ಟು ಮಹಿಳೆಯರನ್ನು ಗುರಿಯಾಗಿಸಿ ಈತ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅನಕ್ಷರಸ್ಥ ಆಗಿದ್ದ ಬ್ರಿಜೇಶ್ ಮೊಬೈಲ್ ಆ್ಯಪ್ ಸಹಾಯದಿಂದ ತನ್ನ ಧ್ವನಿಯನ್ನು ಮಹಿಳೆಯರ ರೀತಿಯಲ್ಲಿ ಬದಲಾಯಿಸಿಕೊಂಡು ತಾನೊಬ್ಬ ಕಾಲೇಜು ಶಿಕ್ಷಕಿ, ಶಿಷ್ಯ ವೇತನ ಕೊಡಿಸುತ್ತೇನೆ ಎಂದು ಬುಡಕಟ್ಟು ಯುವತಿಯರನ್ನು ನಂಬಿಸುತ್ತಿದ್ದ. ಬಳಿಕ ನಂಬಿ ಬರುತ್ತಿದ್ದ ಯುವತಿಯನ್ನು ತನ್ನ ಆಪ್ತರ ಮೂಲಕ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಗುರುತು ಸಿಗದಂತೆ ತಲೆಗೆ ಹೆಲ್ಮೆಟ್ ಹಾಕಿಕೊಂಡು ಅತ್ಯಾಚಾರ ಎಸಗುತ್ತಿದ್ದ. ಇದೇ ರೀತಿ ಏಳು ಯುವತಿಯರ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಸಂತ್ರಸ್ತ ಕೆಲ ಯುವತಿಯರು ಈ ಕುರಿತು ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಐಜಿಪಿ ಮಹೇಂದ್ರ ಸಿಕರಾವರ್ ತಿಳಿಸಿದ್ದಾರೆ.

ಆರೋಪಿತನ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸುವಂತೆ ಸರ್ಕಾರ ಸೂಚಿಸಿದ್ದು ಈ ಕುರಿತು ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಎನ್.ಡಿ.ಟಿ.ವಿ ವೆಬ್ಸೈಟ್ ವರದಿ ಮಾಡಿದೆ.
.ಸೈಬರ್ ವಂಚನೆ | ಮೊಬೈಲ್ ಆ್ಯಪ್ ಹ್ಯಾಕ್: 40ಕ್ಕೂ ಹೆಚ್ಚು ಪ್ರಕರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.