ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಛತ್ತೀಸಗಢದಲ್ಲಿ ಎನ್‌ಕೌಂಟರ್‌: ಒಂಬತ್ತು ನಕ್ಸಲರ ಹತ್ಯೆ; ಮುಂದುವರಿದ ಕಾರ್ಯಾಚರಣೆ

Published : 3 ಸೆಪ್ಟೆಂಬರ್ 2024, 9:20 IST
Last Updated : 3 ಸೆಪ್ಟೆಂಬರ್ 2024, 9:20 IST
ಫಾಲೋ ಮಾಡಿ
Comments

ದಾಂತೇವಾಡ: ಛತ್ತೀಸಗಢದ ಬಸ್ತಾರ್‌ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ 9 ನಕ್ಸಲರು ಹತರಾಗಿದ್ದಾರೆ.

‘ಭದ್ರತಾ ಪಡೆಗಳ ಜಂಟಿ ತಂಡವು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಅರಣ್ಯದಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಗುಂಡಿನ ಚಕಮಕಿ ನಡೆಯಿತು‘ ಎಂದು ಬಸ್ತಾರ್ ವಲಯದ ಐಜಿ ಸುಂದರರಾಜ್ ತಿಳಿಸಿದ್ದಾರೆ.

‘ಗುಂಡಿನ ಚಕಮಕಿಯು ದೀರ್ಘ ಸಮಯ ನಡೆಯಿತು. ಸಮವಸ್ತ್ರಧಾರಿ ಒಂಬತ್ತು ನಕ್ಸಲರ ಶವಗಳು ಸ್ಥಳದಲ್ಲಿ ಸಿಕ್ಕಿವೆ. ಅಲ್ಲದೆ, ಎನ್‌ಕೌಂಟರ್ ಸ್ಥಳದಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ‘ ಎಂದು ಅವರು ಹೇಳಿದರು.

‘ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ಸೇರಿದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ನಕ್ಸಲ್‌ ಸಂಘಟನೆಯ ಪಶ್ಚಿಮ ಬಸ್ತಾರ್ ವಿಭಾಗದ ಘಟಕಕ್ಕೆ ಸೇರಿದ ನಕ್ಸಲರ ಚಲನವಲನದ ಕುರಿತು ಲಭಿಸಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು‘ ಎಂದು ಅವರು ಹೇಳಿದರು.

ಬಸ್ತಾರ್ ಪ್ರದೇಶವು ದಾಂತೇವಾಡ ಮತ್ತು ಬಿಜಾಪುರ ಸೇರಿ ಏಳು ಜಿಲ್ಲೆಗಳನ್ನು ಒಳಗೊಂಡಿದೆ. ಈ ಘಟನೆಯೊಂದಿಗೆ, ಈ ವರ್ಷ ಇದುವರೆಗೆ ಛತ್ತೀಸಗಢದಲ್ಲಿ ನಡೆಸಿದ ಎನ್‌ಕೌಂಟರ್‌ಗಳಲ್ಲಿ ಒಟ್ಟು 154 ನಕ್ಸಲರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT