ನವದೆಹಲಿ: ‘ಜಾಗತಿಕ ಮಟ್ಟದಲ್ಲಿ ಭಾರತವು ಆರ್ಥಿಕ ಶಕ್ತಿಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ 2024ರ ಆರಂಭದಲ್ಲಿ ಸರಣಿ ಮೆಗಾ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

‘ಆತ್ಮನಿರ್ಭರ ಭಾರತ ಉತ್ಸವವು ಜ. 3ರಿಂದ ಜ. 10ರವರೆಗೆ ನವದೆಹಲಿಯ ಭಾರತ್ ಮಂಟಪಮ್‌ನಲ್ಲಿ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಕಲಾವಿದರು, ನೇಕಾರರು, ಖಾದಿ, ಬುಡಕಟ್ಟು ಕಲಾಕೃತಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮತ್ತು ಗುಡಿ ಕೈಗಾರಿಕೆಗಳ ಸಮ್ಮೇಳನ ಇದಾಗಿದೆ. ಇಲ್ಲಿ ತಯಾರಕರು ಮತ್ತು ಗ್ರಾಹಕರ ಮುಖಾಮುಖಿಗೆ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದರು.

‘ಜ. 8ರಿಂದ 10ರವರೆಗೆ ‘ಇಂಡಸ್ ಆಹಾರ ಉತ್ಸವ’ ಜರುಗಲಿದೆ. ಇದು ಗ್ರೇಟರ್ ನೋಯ್ಡಾದಲ್ಲಿರುವ ಇಂಡಿಯಾ ಎಕ್ಸ್‌ಪೋಷನ್ ಮಾರ್ಟ್‌ನಲ್ಲಿ ಆಯೋಜನೆಗೊಳ್ಳಲಿದೆ. ಫೆ. 1ರಿಂದ 3ರವರೆಗೆ ಭಾರತ್ ಮಂಟಪಮ್‌ನಲ್ಲಿ ‘ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2024’ ಆಯೋಜಿಸಲಾಗಿದೆ.

‘10 ಲಕ್ಷ ಚದರಡಿ ಪ್ರದೇಶದಲ್ಲಿ ಆಯೋಜನೆಗೊಂಡಿರುವ ಈ ಮೇಳದಲ್ಲಿ ಆಟೊಮೊಬೈಲ್ ಹಾಗೂ ಮೊಬಿಲಿಟಿ ಕ್ಷೇತ್ರದ ತಯಾರಕರು, ಮಾರಾಟಗಾರರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ನವೀನ ತಂತ್ರಜ್ಞಾನಗಳ ಪರಿಚಯದ ಜತೆಗೆ ಭಾರತದ ತಂತ್ರಜ್ಞಾನ ಕ್ಷೇತ್ರದ ಪ್ರಾಬಲ್ಯದ ಪರಿಚಯವೂ ಆಗಲಿದೆ. ಜತೆಗೆ ಮುಂದಿನ ತಲೆಮಾರಿನ ಪರಿಸರ ಸ್ನೇಹಿ ಉತ್ಪನ್ನಗಳು, ನಿರ್ಮಾಣ ಕ್ಷೇತ್ರದ ಉಪಕರಣಗಳು ಹಾಗೂ ಸಾರಿಗೆ ಕ್ಷೇತ್ರದ ಹಲವು ಹೊಸತುಗಳು ಇರಲಿವೆ’ ಎಂದಿದ್ದಾರೆ.

ಫೆ. 26ರಿಂದ 29ರವರೆಗೆ ಭಾರತ್ ಮಂಟಪಮ್ ಮತ್ತು ಯಶೋಭೂಮಿ ಎರಡು ಕಡೆ ‘ಭಾರತ್ ಟೆಕ್ಸ್’ ನಡೆಯಲಿದೆ. ಈ ಮೇಳವು 20 ಲಕ್ಷ ಚದರಡಿ ಪ್ರದೇಶದಲ್ಲಿ ಆಯೋಜಿಸಲಾಗುತ್ತಿದೆ. ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದ ದೊಡ್ಡ ಕಾರ್ಯಕ್ರಮ ಇದಾಗಿದೆ. ಜವಳಿ ಮತ್ತು ಫ್ಯಾಷನ್ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ, ವಸ್ತುವೂ ಇಲ್ಲಿ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.