ಲುಮಥರಿ (ಮೇಘಾಲಯ):ಈಶಾನ್ಯ ರಾಜ್ಯ ಮೇಘಾಲಯದ ಕಲ್ಲಿದ್ದಲು ಗಣಿಯೊಳಗೆ ಸಿಲುಕಿರುವ 15 ಕಾರ್ಮಿಕರ ರಕ್ಷಣ ಕಾರ್ಯ ಭರದಿಂದ ಸಾಗುತ್ತಿದೆ ಎಂದುಕಾರ್ಯಾಚರಣೆಯ ನೇತೃತ್ವವಹಿಸಿರುವಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಒಡಿಶಾದಿಂದ ಆಗಮಿಸಿರುವ ನುರಿತ ಅಗ್ನಿಶಾಮಕ ಸಿಬ್ಬಂದಿಗಳು ಬೆಳಗ್ಗೆಯಿಂದ 10 ಪಂಪ್ಗಳ ಮೂಲಕ ನೀರನ್ನು ಹೊರಹಾಕುತ್ತಿದ್ದಾರೆ. ಅಲ್ಲಲ್ಲಿ ಕೆಸರು ಸಿಗುತ್ತಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಕಾರ್ಮಿಕರ ಮೂರು ಹೆಲ್ಮೆಟ್ಗಳು ದೊರೆತಿದ್ದು ಇಲ್ಲಿಯವರೆಗೂ ಗಣಿಯಲ್ಲಿ ಸಿಲುಕಿರುವವರ ಯಾವುದೇ ಕುರುಹು ಪತ್ತೆಯಾಗಿಲ್ಲ. ಕಳೆದ 16 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.

ಲುಮಥರಿ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಯಲ್ಲಿ ಸುಮಾರು 370 ಅಡಿ ಆಳದಲ್ಲಿ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಗಣಿಯಲ್ಲಿ ನೀರು ಹಾಗೂ ಕೆಸರು ತುಂಬಿಕೊಂಡಿದೆ. ನೀರನ್ನು ಹೊರ ಹಾಕುವ ಕಾರ್ಯ ಭರದಿಂದ ಸಾಗುತ್ತಿದೆ.

ಶುಕ್ರವಾರ ರಾತ್ರಿ ಆಗಮಿಸಿದ ಒಡಿಶಾದ ಅಗ್ನಿಶಾಮಕ ಸಿಬ್ಬಂದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ ಎಂದು ದೂರಿದ್ದಾರೆ. ಸ್ಥಳೀಯ ಮೇಘಾಲಯ ಸರ್ಕಾರ ಆಹಾರ ಮತ್ತು ಬ್ಲಾಂಕೇಟ್ಗಳನ್ನು ನೀಡಿಲ್ಲ ಎಂದು ಸಿಬ್ಬಂದಿಗಳು ದೂರಿದ್ದಾರೆ. ಇವರು ಲುಮಥರಿ ಗಣಿ ಪ್ರದೇಶದಿಂದ 25 ಕಿ.ಮೀ ದೂರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಂಗಿದ್ದಾರೆ.

ಆಂಧ್ರಪ್ರದೇಶದಿಂದ 15 ಜನರಿರುವಮುಳುಗು ತಜ್ಞರ ತಂಡವೊಂದು ಮೇಘಾಲಯದತ್ತ ಪ್ರಯಾಣ ಬೆಳೆಸಿದ್ದು ಭಾನುವಾರ ಬೆಳಗ್ಗೆ ಲುಮಥರಿಯನ್ನು ತಲುಪಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.