ನವದೆಹಲಿ: ದೇಶದ ಆರ್ಥಿಕ ಪರಿಸ್ಥಿತಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
.ಇಷ್ಟು ಸಂಕಷ್ಟ ಸೃಷ್ಟಿಯಾಗಲು ಪ್ರಧಾನಿ ನಿರ್ಲಕ್ಷ್ಯವೇ ಕಾರಣ: ಮಲ್ಲಿಕಾರ್ಜುನ ಖರ್ಗೆ.
‘ಮೋದಿನಾಮಿಕ್ಸ್ ಭಾರತದ ಆರ್ಥಿಕತೆಗೆ ಶಾಪವಾಗಿದೆ. ಹಳಸಿದ ಹಳೆಯ ಉಪನ್ಯಾಸಗಳನ್ನು ಪದೇ ಪದೇ ಹೇಳುವುದರಿಂದ ಪ್ರಧಾನಿಯವರ ಸಂಪೂರ್ಣ ವೈಫಲ್ಯಗಳಿಗೆ ಹೊಳಪು ತುಂಬಲಾಗದು’ ಎಂದು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಅವರು ಬರೆದುಕೊಂಡಿದ್ದಾರೆ.
.ಇಸ್ರೇಲ್ ಸೇನೆಗೆ 15 ಸಾವಿರ ಭಾರತೀಯರ ನೇಮಕ: ಮೋದಿ ಸರ್ಕಾರದ ವಿರುದ್ಧ ಖರ್ಗೆ ಕಿಡಿ.
ಹೆಚ್ಚುತ್ತಿರುವ ಮನೆಯ ಋಣಭಾರ, ಹಣದುಬ್ಬರ, ಉತ್ಪಾದನಾ ವಲಯದ ಸಂಕಷ್ಟಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, ‘ಮೇಕ್ ಇನ್ ಇಂಡಿಯಾ ಅದ್ಭುತವಾಗಿ ವಿಫಲವಾಗಿದೆ’ ಎಂದು ಟೀಕಿಸಿದ್ದಾರೆ.

2013-14 ರಿಂದ 2022–23ರ ನಡುವೆ ಮನೆಯ ಋಣಭಾರ ಶೇ 241ರಷ್ಟು ಏರಿಕೆಯಾಗಿದೆ. ಜಿಡಿಪಿಗೆ ಹೋಲಿಕೆ ಮಾಡಿದರೆ ಶೇ 40ರಷ್ಟಾಗುತ್ತದೆ, ಇದು ಸಾರ್ವಕಾಲಿಕ ದಾಖಲೆ. ಮನೆಯ ಉಳಿತಾಯ 50 ವರ್ಷಗಳ ಕನಿಷ್ಠಕ್ಕೆ ಇಳಿದಿದೆ. ಕೋವಿಡ್ –19 ಸಾಂಕ್ರಾಮಿಕದ ಬಳಿಕ ಭಾರತೀಯ ಕುಟುಂಬಗಳ ಖರ್ಚು ಆದಾಯಕ್ಕಿಂತ ಹೆಚ್ಚಳವಾಗಿದೆ ಎಂದು ಬರೆದುಕೊಂಡಿದ್ದಾರೆ.
.ರಾಜ್ಯತ್ವ ಕಿತ್ತುಕೊಂಡವರಿಗೆ ಪಾಠ ಕಲಿಸಲು ಕೊನೆಯ ಅವಕಾಶ: ಕಾಶ್ಮೀರದ ಜನತೆಗೆ ಖರ್ಗೆ.
‘10 ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾ ಅದ್ಭುತವಾಗಿ ವಿಫಲವಾಗಿದೆ. ಯುಪಿಎ ಅವಧಿಯಲ್ಲಿ ಹೆಚ್ಚಳವಾಗಿದ್ದ ರಫ್ತು ನಿಮ್ಮ ನೀತಿಗಳಿಂದಾಗಿ ಇಳಿಕೆಯಾಗಿದೆ’ ಎಂದು ಖರ್ಗೆ ಹೇಳಿದ್ದಾರೆ.
.ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ಇಳಿಸುವವರೆಗೂ ನಾನು ಸಾಯುವುದಿಲ್ಲ: ಖರ್ಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.