ಭೋಪಾಲ್ (ಮಧ್ಯಪ್ರದೇಶ): ಹಿಂದೂ ದೇವತೆ ಕಾಳಿ ಧೂಮಪಾನ ಮಾಡುತ್ತಿರುವ ಮತ್ತು ಎಲ್ಜಿಬಿಟಿ ಧ್ವಜ ಹಿಡಿದಿರುವ ಪೋಸ್ಟರ್ನ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರು ಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ಗುರುವಾರ ಲುಕ್ಔಟ್ ನೋಟಿಸ್ ಹೊರಡಿಸಿದ್ದಾರೆ.

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕೆನಡಾದ ಚಿತ್ರ ನಿರ್ದೇಶಕಿ ಮಣಿಮೇಕಲೈ ವಿರುದ್ಧ ಲುಕ್ಔಟ್ ಸುತ್ತೋಲೆ ಹೊರಡಿಸುವಂತೆ ಕೇಂದ್ರವನ್ನು ಒತ್ತಾಯಿಸುವುದಾಗಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆಯಾಗಿದೆ.

ಕಾಳಿ ಮಾತೆಯ ಅಪಮಾನ ಮಾಡುವುದೇ ಮಣಿಮೇಕಲೈ ಅವರ ಪೋಸ್ಟರ್ನ ಉದ್ದೇಶ ಎಂದು ಮಿಶ್ರಾ ಗುರುವಾರ ಆರೋಪಿಸಿದ್ದರು.

ಮಹುವಾಗೂ ಅಂಟಿದ ವಿವಾದ

ಪ್ರತಿಯೊಬ್ಬ ವ್ಯಕ್ತಿ ದೇವರಿಗೆ ವಿಶಿಷ್ಟ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಕಾಳಿ ದೇವಿಯನ್ನು ಮಾಂಸ ತಿನ್ನುವ ಮತ್ತು ಮದ್ಯಸ್ವೀಕರಿಸುವ ದೇವತೆಯಾಗಿ ಕಲ್ಪಿಸಿಕೊಳ್ಳಲು ವ್ಯಕ್ತಿಯಾಗಿ ನನಗೆ ಎಲ್ಲ ಹಕ್ಕಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದಾಗಿ ವಿವಾದವು ಮತ್ತಷ್ಟು ಉಲ್ಬಣಗೊಂಡಿತು.

ಹೀಗಾಗಿ ಮಹುವಾ ಮೊಯಿತ್ರಾ ಅವರ ವಿರುದ್ಧವೂ ಭೋಪಾಲ್ನ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇವುಗಳನ್ನೂ ಓದಿ

ನನಗೆ ಎಲ್ಲಿಯೂ ಸುರಕ್ಷಿತೆ ಎಂಬ ಭಾವನೆ ಮೂಡುತ್ತಿಲ್ಲ: ಲೀನಾ ಮಣಿಮೇಕಲೈ

ಕಾಳಿ ಮಾತೆ ಕೈಯಲ್ಲಿ ಸಿಗರೇಟು: ವಿವಾದದ ಬಗ್ಗೆ ಭಯವಿಲ್ಲ ಎಂದ ನಿರ್ದೇಶಕಿ ಲೀನಾ

’ಕಾಳಿ’ ಮಾತೆ ಕೈಯಲ್ಲಿ ಸಿಗರೇಟು; ವಿವಾದಕ್ಕೀಡಾದ ನಿರ್ದೇಶಕಿ ಲೀನಾ ವಿರುದ್ಧ ದೂರು

‘ಎಚ್ಚರಿಕೆಯಿಂದಿರು ಮಹುವಾ...’ ಪದ್ಯ ಹಂಚಿಕೊಂಡ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.