ಭೋಪಾಲ್, ಮಧ್ಯಪ್ರದೇಶ: ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರು ತಮ್ಮದೇ ಪಕ್ಷದ ಶಾಸಕ ಸುದೇಶ್ ರಾಯ್ ವಿರುದ್ಧ ಅಕ್ರಮವಾಗಿ ಮದ್ಯದ ಅಂಗಡಿ ನಡೆಸುತ್ತಿರುವ ಆರೋಪ ಮಾಡಿದ್ದು, ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

‘ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವ ಸಲುವಾಗಿ ನನ್ನ ಲೋಕಸಭಾ ಕ್ಷೇತ್ರದ ಕೆಲ ಸ್ಥಳಗಳಿಗೆ ಭೇಟಿ ನೀಡಿದ್ದ ವೇಳೆ ಸೆಹೋರ್ ಜಿಲ್ಲೆಯ ಖಾಜೂರಿಯಾ ಕಾಲಾ ಪ್ರದೇಶಕ್ಕೂ ಹೋಗಿದ್ದೆ. ಆಗ ಕೆಲ ಶಾಲ ಬಾಲಕಿಯರು ತಮ್ಮ ಶಾಲೆಯ ಎದುರು ಮದ್ಯದಂಗಡಿ ತೆರೆದಿರುವ ಕುರಿತು ದೂರಿದರು’ ಎಂದು ಅವರು ಹೇಳಿದ್ದಾರೆ.

ಬಾಲಕಿಯರು ಬೇಸರಗೊಂಡಿದ್ದರು ಮತ್ತು ಅವರ ಕಣ್ಣಲ್ಲಿ ನೀರಿತ್ತು. ಮದ್ಯದಂಗಡಿ ಎದುರು ಜನರು ಸೇರುತ್ತಾರೆ. ಅವರು ತಮ್ಮನ್ನು ಚುಡಾಯಿಸುತ್ತಾರೆ, ತಮಗೆ ಇಲ್ಲಿ ಭದ್ರತೆ ಇಲ್ಲ ಎಂದರು. ಪಾನಮತ್ತರಾದ ಕೆಲವರು ತಮ್ಮ ಮನೆಗಳಿಗೂ ನುಗ್ಗಿದ್ದಾರೆ ಎಂದು ಅಲ್ಲಿಯ ಕೆಲ ಮಹಿಳೆಯರು ತಿಳಿಸಿದರು ಎಂದು ಪ್ರಗ್ಯಾ ಹೇಳಿದ್ದಾರೆ.

ಈ ಕುರಿತು ತಮಗೆ ಏನೂ ತಿಳಿದಿಲ್ಲ ಎಂದು ಅಲ್ಲಿದ್ದ ಪೊಲೀಸರೊಬ್ಬರು ಹೇಳಿದ್ದಾಗಿಯೂ ಪ್ರಗ್ಯಾ ಆರೋಪಿಸಿದ್ದಾರೆ.

‘ಈ ಮದ್ಯದಂಗಡಿಯು ಸುದೇಶ್ ರಾಯ್ಗೆ ಸೇರಿದೆ ಎಂದು ಕೆಲ ಅಧಿಕಾರಿಗಳು ಮತ್ತು ಜನರು ನನಗೆ ತಿಳಿಸಿದ್ದಾರೆ. ಇಂಥ ಅಕ್ರಮ ಎಸಗುತ್ತಿರುವ ವ್ಯಕ್ತಿ ಬಿಜೆಪಿಯಲ್ಲಿ ಇರಬಾರದು. ಅವರನ್ನು ಕೂಡಲೇ ವಜಾಗೊಳಿಸಬೇಕು’ ಎಂದಿದ್ದಾರೆ.

ಈ ಆರೋಪದ ಕುರಿತು ಸುದೇಶ್ ರಾಯ್ ಅವರನ್ನು ಪ್ರಶ್ನಿಸಿದಾಗ, ‘ಪ್ರಗ್ಯಾ ಮಾಡಿರುವ ಆರೋಪದ ಕುರಿತು ನೀವೇ ತನಿಖೆ ನಡೆಸಿ. ಮದ್ಯದಂಗಡಿ ಕುರಿತು ಜಿಲ್ಲಾಧಿಕಾರಿಯಿಂದಲೇ ಮಾಹಿತಿ ಪಡೆಯಿರಿ’ ಎಂದಿದ್ದಾರೆ.
.ಪ್ರಗ್ಯಾ ಸಿಂಗ್, ಲೇಖಿ... BJPಯ ಮೊದಲ ಪಟ್ಟಿಯಲ್ಲಿ ಪ್ರಮುಖರಿಗಿಲ್ಲ ಟಿಕೆಟ್.ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ.LS Polls: ಕೈತಪ್ಪಿದ ಟಿಕೆಟ್, ಮೋದಿ ಬಗ್ಗೆ ಸಂಸದೆ ಸಾಧ್ವಿ ಪ್ರಜ್ಞಾ ಹೇಳಿದ್ದೇನು?.ಪೊಲೀಸರಿಂದ ಬಿಡಿಸಲು ಹೆಣ್ಣು ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ: ಸಾಧ್ವಿ ಪ್ರಗ್ಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.