ಬಾಲಘಾಟ್: ನಗರ ನಕ್ಸಲರ ಮೂಲಕ ನಕ್ಸಲ್‌ವಾದ ಉತ್ತೇಜಿಸುವ ಮತ್ತು ಅದರ ಚಟುವಟಿಕೆಗಳಿಗೆ ಹಣ ಒದಗಿಸುವ ಮಾರ್ಗಗಳನ್ನು ಭದ್ರತಾಪಡೆಗಳು ಗುರಿಯಾಗಿಸಿಕೊಂಡಿದ್ದು, ನಕ್ಸಲ್‌ವಾದವನ್ನು ಬೇರು ಸಮೇತ ಕಿತ್ತು ಹಾಕಲಾಗುವುದು ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.

‘ನಗರ ನಕ್ಸಲ್’ ಎಂಬ ಪದವನ್ನು ಕೆಲವು ರಾಜಕೀಯ ಆಯಾಮಗಳಲ್ಲಿ ನಕ್ಸಲ್ ವಾದಿಗಳು ಮತ್ತು ನಕ್ಸಲರ ಮೇಲೆ ಸಹಾನುಭೂತಿ ಹೊಂದಿರುವ ಕೆಲವು ಸಾಮಾಜಿಕ ಕಾರ್ಯಕರ್ತರಿಗೆ ಬಳಸಲಾಗುತ್ತದೆ.

ನಕ್ಸಲ್ ಪೀಡಿತ ಜಿಲ್ಲೆಗಳ ಪರಿಸ್ಥಿತಿ ಪರಿಶೀಲಿಸಲು ಉನ್ನತ ಮಟ್ಟದ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಸರ್ಕಾರ ಯಶಸ್ವಿಯಾಗಿದ್ದು, ಇದರಲ್ಲಿ ರಾಜ್ಯದ ಪೊಲೀಸ್ ಮತ್ತು ಹಾಕ್ ಪಡೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದರು.

‘ನಕ್ಸಲ್ ಸಿದ್ಧಾಂತವನ್ನು ಬೇರು ಸಮೇತ ಕೊನೆಗೊಳಿಸಲು, ನಗರ ನಕ್ಸಲೀಯರ ವಿರುದ್ಧ ಮತ್ತು ನಕ್ಸಲ್ ಚಟುವಟಿಕೆಗೆ ಹಣದ ಪೂರೈಕೆ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ’ ಎಂದೂ ಮಿಶ್ರಾ ಹೇಳಿದ್ದಾರೆ.

‘ನಗರ ನಕ್ಸಲರು ತಮ್ಮ ಸಿದ್ಧಾಂತ ಉತ್ತೇಜಿಸಲು ಯುವಜನರನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಪಳಗಿಸುತ್ತಿರುವುದು ಹೇಗೆ? ಯಾವ ಮಾರ್ಗಗಳಲ್ಲಿ ಹಣಕಾಸು ನೆರವು ಒದಗಿಸುತ್ತಿದ್ದಾರೆ ಎನ್ನುವುದನ್ನು ಕಂಡುಕೊಳ್ಳಲು ಕಾರ್ಯೋನ್ಮುಖರಾಗಿದ್ದೇವೆ. ನಾವು ರೈತರಿಗೆ ಬೆಳೆಗಳನ್ನು ಬೆಳೆಯಲು ಕೊಡುತ್ತಿರುವ ಅಮೋನಿಯಂ ನೈಟ್ರೇಟ್ ಅನ್ನು ನಕ್ಸಲರು ಸ್ಫೋಟಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ರಾಸಾಯನಿಕಗಳು ನಕ್ಸಲರ ಕೈಗೆ ಸಿಗದಂತೆ ತಡೆಯಲು ಪರಿಣಾಮಕಾರಿ ಕಾರ್ಯತಂತ್ರ ರೂಪಿಸಲಾಗುವುದು’ ಎಂದು ಮಿಶ್ರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.