ಮುಂಬೈ: ದೇವಾಲಯಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ಕೋರ್ಸ್ ಆರಂಭಿಸಲು ಆಕ್ಸ್ಫರ್ಡ್ನ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಮುಂಬೈ ವಿಶ್ವವಿದ್ಯಾಲಯ ಒಡಂಬಡಿಕೆಗೆ ಸಹಿ ಹಾಕಿದೆ.

ಈ ಒಡಂಬಡಿಕೆ ಅನ್ವಯ ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಈ ಡಿಪ್ಲೊಮಾ ಕೋರ್ಸ್ ಕಲಿಯಬಹುದಾಗಿದೆ. ಇತರ ಡಿಪ್ಲೊಮಾ ಕೋರ್ಸ್ಗಳಂತೆಯೇ ದೇವಾಲಯ ನಿರ್ವಹಣೆ ಕೋರ್ಸ್ ಕೂಡಾ ಇರಲಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ.

ಆಕ್ಸ್ಫರ್ಡ್ನ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ ವಿಶ್ವವಿದ್ಯಾಲಯದ ಹಿಂದೂ ಅಧ್ಯಯನ ಕೇಂದ್ರ ಹಾಗೂ ಸಂಸ್ಕೃತ ವಿಭಾಗಗಳೂ ಜತೆಗೂಡಿವೆ.

ಈ ಒಡಂಬಡಿಕೆಯ ಜತೆಗೆ ಹಿಂದೂ ತತ್ವಜ್ಞಾನದ ಕುರಿತು ಸಮಗ್ರ ಅಧ್ಯಯನ ನಡೆಸಲು ಹೆಚ್ಚು ಅನುಕೂಲವಾಗಲಿದೆ ಎಂದು ಮುಂಬೈ ವಿಶ್ವವಿದ್ಯಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.