ನವದೆಹಲಿ: ಮಹಾತ್ಮ ಗಾಂಧಿಯನ್ನು ಹತ್ಯೆಗೈದ ನಾಥೂರಾಂ ಗೋಡ್ಸೆಯನ್ನು ‘ದೇಶಭಕ್ತ’ ಎನ್ನುವ ಅರ್ಥ ಬರುವಂತೆ ಉಲ್ಲೇಖಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಶುಕ್ರವಾರ ಕ್ಷಮೆ ಯಾಚಿಸಿದರು.

‘ಸಹ ಸಂಸದರೊಬ್ಬರುನನ್ನನ್ನು ಯಾವುದೇ ಆಧಾರವಿಲ್ಲದೆ ಭಯೋತ್ಪಾದಕಿ ಎಂದು ಕರೆದಿದ್ದಾರೆ. ಇದರಿಂದ ನನಗೆ ಅವಮಾನವಾಗಿದೆ’ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಅವರ ಟ್ವೀಟ್ ಕುರಿತು ಉಲ್ಲೇಖಿಸಿದರು. ‘ನನ್ನ ಹೇಳಿಕೆಗಳನ್ನು ತಿರುಚಲಾಗಿದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ’ ಎಂದು ಪ್ರಜ್ಞಾ ಸಿಂಗ್ ಠಾಕೂರ್ ನುಡಿದರು.

ಇದನ್ನೂ ಓದಿ:ಗೋಡ್ಸೆ ದೇಶಭಕ್ತ ಎಂದ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್

ಪ್ರಜ್ಞಾ ಹೇಳಿಕೆಯ ನಂತರ ಲೋಕಸಭೆಯಲ್ಲಿ ಪ್ರತಿಪಕ್ಷಗಳು ‘ಮಹಾತ್ಮಾ ಗಾಂಧಿ ಕಿ ಜೈ’ ಮತ್ತು ‘ಡೌನ್ ಡೌನ್ ಗೋಡ್ಸೆ’ಘೋಷಣೆ ಕೂಗುತ್ತಾ ಗದ್ದಲ ಎಬ್ಬಿಸಿದವು. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಇದೇ ಸಂದರ್ಭ ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಅವಕಾಶ ಕೋರಿದರು.

ಸದನವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸಿದ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ, ‘ಈ ವಿಚಾರದ ಬಗ್ಗೆ ರಕ್ಷಣಾ ಸಚಿವರು ಈಗಾಗಲೇ ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಹೇಳಿಕೆಯ ಬಗ್ಗೆ ಪ್ರಜ್ಞಾ ಸಿಂಗ್ ಠಾಕೂರ್ ಅವರೂ ತಮ್ಮ ಸ್ಪಷ್ಟನೆ ನೀಡಿದ್ದಾರೆ, ಕ್ಷಮೆ ಯಾಚಿಸಿದ್ದಾರೆ. ಈ ವಿಷಯದಲ್ಲಿರಾಜಕೀಯದ ಆಟ ಬೇಡ’ ಎಂದು ಸದಸ್ಯರನ್ನು ವಿನಂತಿಸಿದರು.

ಇದನ್ನೂ ಓದಿ:ಪ್ರಜ್ಞಾ ಸಿಂಗ್ಗೆ ಭಯೋತ್ಪಾದಕಿ ಎಂದ ರಾಹುಲ್

‘ಗೋಡ್ಸೆ ಕುರಿತಂತೆ ಪ್ರಜ್ಞಾ ಅವರ ಮಾತುಗಳನ್ನು ಕಡತದಿಂದ ತೆಗೆದು ಹಾಕಲಾಗಿದೆ. ಮಹಾತ್ಮಾ ಗಾಂಧಿ ಆದರ್ಶವನ್ನು ಇಡೀ ವಿಶ್ವ ಅನುಸರಿಸುತ್ತದೆ. ನಾವು ಈ ವಿಚಾರವನ್ನು ರಾಜಕೀಯಕ್ಕೆ ಬಳಸಿದರೆ ಜಗತ್ತಿನ ಎದುರು ತೆರೆದುಕೊಂಡಂತೆಆಗುತ್ತದೆ. ಗಾಂಧಿ ಹತ್ಯೆಯನ್ನು ಸದನ ವೈಭವೀಕರಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇನ್ನಷ್ಟು...

ಪ್ರಜ್ಞಾ ಮಾತಿಗೆ ವ್ಯಾಪಕ ಪ್ರತಿರೋಧ

ರಕ್ಷಣಾ ಸಮಿತಿಗೆ ಪ್ರಜ್ಞಾ ಠಾಕೂರ್ ನೇಮಕಕ್ಕೆ ಆಕ್ಷೇಪ

ಸಾಧ್ವಿ ಪ್ರಜ್ಞಾ ಸಿಂಗ್ರನ್ನು ಕ್ಷಮಿಸುವುದಿಲ್ಲ: ಪ್ರಧಾನಿ ಮೋದಿ

ಗೋಡ್ಸೆ ಕುರಿತ ಹೇಳಿಕೆಗಳು ಬಿಜೆಪಿ ಸಿದ್ಧಾಂತಕ್ಕೆ ವಿರುದ್ಧವಾದವು: ಅಮಿತ್ ಶಾ

ಬಾಬರಿ ಮಸೀದಿ ಧ್ವಂಸ ಬಗ್ಗೆ ಹೆಮ್ಮೆ ಇದೆ: ಸಾಧ್ವಿ ಪ್ರಜ್ಞಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.