ಅಮರಾವತಿ(ಆಂಧ್ರಪ್ರದೇಶ): ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಆಂಧ್ರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯಕ್ಕಾಗಿ ಇಸ್ಲಾಮಿಕ್ ಬ್ಯಾಂಕ್ ಸ್ಥಾಪಿಸುವುದಾಗಿ ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಭರವಸೆ ನೀಡಿದ್ದಾರೆ.

'ಯುವ ಗಳಂ' ಪಾದಯಾತ್ರೆಯನ್ನು ಪುನರಾರಂಭಿಸಿದ ಲೋಕೇಶ್, ಈ ಹಿಂದಿನ ಮುಖ್ಯಮಂತ್ರಿ ಮತ್ತು ಟಿಡಿಪಿಯ ಸಂಸ್ಥಾಪಕ ಎನ್.ಟಿ. ರಾಮರಾವ್ ಅವರು ಅಲ್ಪಸಂಖ್ಯಾತರ ನಿಗಮವನ್ನು ಸ್ಥಾಪಿಸಿದ್ದರು. ಆದರೆ ವೈ.ಎಸ್ ಜಗನ್ ಮೋಹನ್ ರೆಡ್ಡಿ ಸಿಎಂ ಆದ ಬಳಿಕ ನಿಗಮವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಟಿಡಿಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕಾಗಿ ‘ಇಸ್ಲಾಮಿಕ್ ಬ್ಯಾಂಕ್’ ಸ್ಥಾಪಿಸುವುದರ ಮೂಲಕ ಅಲ್ಪಸಂಖ್ಯಾತ ಸಮುದಾಯಕ್ಕೆ ಮತ್ತೆ ಜೀವ ತುಂಬುವುದಾಗಿ ಲೋಕೇಶ್ ಭರವಸೆ ನೀಡಿದ್ದಾರೆ.

ಚಂದ್ರಬಾಬು ನಾಯ್ಡು ಅವರು ಜಾರಿಗೆ ತಂದ ಎಲ್ಲಾ ಕಲ್ಯಾಣ ಯೋಜನೆಗಳನ್ನು ರೆಡ್ಡಿ ಅವರು ಸ್ಥಗಿತಗೊಳಿಸಿದ್ದಾರೆ. ರೈತರಿಗೆ ಕ್ರಿಮಿನಾಶಕಗಳ ಬದಲಿಗೆ ಅಗ್ಗದ ಮದ್ಯ ದೊರೆಯುತ್ತಿದೆ ಎಂದು ಲೋಕೇಶ್ ವಾಗ್ದಾಳಿ ನಡೆಸಿದ್ದಾರೆ.

ಲೋಕೇಶ್ ಪಾದಯಾತ್ರೆ ಶ್ರೀ ಕಾಳಹಸ್ತಿ ವಿಧಾನಸಭಾ ಕ್ಷೇತ್ರದ ತೊಂಡಮನುಪುರಂ ಗ್ರಾಮವನ್ನು ತಲುಪಿದೆ. ಈ ವೇಳೆ ರೈತರು ಸೇರಿದಂತೆ ಗಾಂಡ್ಲ, ತೆಲಿಕುಲ, ದೇವ ತೆಲಿಕುಲ ಸಮುದಾಯಗಳಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಇವನ್ನೂ ಓದಿ: ಅನುಮತಿ ಇಲ್ಲದೆ ಪ್ರತಿಭಟನೆ: ತ.ನಾಡಲ್ಲಿ 3500 ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್

114 ವರ್ಷಗಳ ಹಿಂದೆ ಬ್ರಿಟೀಷರು ನೆಟ್ಟಿದ್ದ ತೇಗದ ಮರ ₹40 ಲಕ್ಷಕ್ಕೆ ಹರಾಜು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.