ಹೈದರಾಬಾದ್: ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಜ.27ರಂದು ಆರಂಭಿಸಿದ್ದ ‘ಯುವ ಗಳಂ ಪಾದಯಾತ್ರೆ’ಯು ಸೋಮವಾರ 3000 ಕಿ.ಮೀ ಪೂರ್ಣಗೊಳಿಸಿ ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ.

ಲೋಕೇಶ್ ಮತ್ತು ಅವರ ತಂಡವು ವೈಎಸ್ಆರ್ಸಿಪಿ ನೇತೃತ್ವದ ಸರ್ಕಾರದ ಎಲ್ಲ ಅಡಿತಡೆಗಳನ್ನು ದಾಟಿ 3,000 ಕಿ.ಮೀ ಪಾದಯಾತ್ರೆಯನ್ನು ಪೂರ್ಣಗೊಳಿಸಿದೆ. ಇದರ ಸ್ಮರಣಾರ್ಥ ಅವರು, ತುನಿ ವಿಧಾನಸಭಾ ಕ್ಷೇತ್ರದ ತೇಟಗುಂಟಾ ಪಂಚಾಯಿತಿಯಲ್ಲಿ ಫಲಕವನ್ನು ಅನಾವರಣ ಮಾಡಿದರು ಮತ್ತು ವೈಎಸ್ಆರ್ಸಿಪಿ ಸರ್ಕಾರ ಮುಚ್ಚಿರುವ ಅಣ್ಣಾ ಕ್ಯಾಂಟೀನ್ ಸೇವೆಯನ್ನು ಪುನರಾರಂಭಿಸುವುದಾಗಿ ತಿಳಿಸಿದರು.

ಲೋಕೇಶ್ ಅವರೊಂದಿಗೆ ಪತ್ನಿ ನಾರಾ ಬ್ರಹ್ಮಣಿ, ಪುತ್ರ ದೇವಾಂಶ್ ಮತ್ತು ಕುಟುಂಬ ಸದಸ್ಯರೂ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ತೇಟಗುಂಟದಲ್ಲಿ ಸೋಮವಾರ ಹಬ್ಬದ ವಾತಾವರಣ ಇತ್ತು. ಟಿಡಿಪಿ ನಾಯಕರು ಮತ್ತು ಜನರು ಲೋಕೇಶ್ ಅವರಿಗೆ ಬೆಂಬಲ ಸೂಚಿಸಲು ಅಲ್ಲಿಗೆ ಬಂದಿದ್ದರು.

ಯುವ ಗಳಂ ಪಾದಯಾತ್ರೆಯು ಈವರೆಗೆ 10 ಜಿಲ್ಲೆಗಳ, 92 ವಿಧಾನಸಭಾ ಕ್ಷೇತ್ರಗಳು ಮತ್ತು 217 ಮಂಡಲಗಳು ಹಾಗೂ 1,915 ಗ್ರಾಮಗಳಲ್ಲಿ ಸಂಚರಿಸಿದೆ.

ಈ ಸಂದರ್ಭದಲ್ಲಿ ಜನರಿಗೆ ಪ್ರಸಕ್ತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಲೋಕೇಶ್ ಅವರು 90 ಸಾರ್ವಜನಿಕ ಸಭೆ, 142 ಸಂವಾದ, 12 ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.