ಲಂಡನ್: ಯುದ್ಧವಿಮಾನಗಳನ್ನು ಹೊತ್ತೊಯ್ಯಬಲ್ಲ ಸುಸಜ್ಜಿತ ನೌಕೆ ನಿರ್ಮಾಣ ಮಾಡುವ ಸಂಬಂಧ ಭಾರತದೊಂದಿಗೆ ಬ್ರಿಟನ್ ಮಾತುಕತೆ ನಡೆಸಿದೆ.

‘ಮೇಕ್ ಇನ್ ಇಂಡಿಯಾ’ ಅಡಿ ನಿರ್ಮಿಸಲಾಗುವ ಈ ನೌಕೆ ತೂಕ 65 ಸಾವಿರ ಟನ್ ಇರಲಿದೆ. ಬ್ರಿಟನ್ನಲ್ಲಿ ಈಗಾಗಲೇ ಬಳಕೆಯಲ್ಲಿರುವ ‘ಎಚ್ಎಂಎಸ್ ಕ್ವೀನ್ ಎಲಿಜಬೆತ್’ ಮಾದರಿಯಲ್ಲಿಯೇ ಭಾರತದ ನೌಕೆ ಇರಲಿದ್ದು, ಇದಕ್ಕೆ ‘ಐಎನ್ಎಸ್ ವಿಶಾಲ್’ ಎಂದು ಹೆಸರಿಸಲಾಗುತ್ತದೆ. 2022ರಲ್ಲಿ ಭಾರತಕ್ಕೆ ಲಭ್ಯವಾಗಲಿದೆ.

‘ರೋಸಿತ್ ಎಂಬ ಹಡಗು ನಿರ್ಮಾಣ ಸ್ಥಳಕ್ಕೆ ಭಾರತದ ನಿಯೋಗ ಈಗಾಗಲೇ ಭೇಟಿ ನೀಡಿದೆ’ ಎಂದು ಸಂಡೇ ಮಿರರ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.