ಮುಂಬೈ: ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ (ಎನ್ಸಿಪಿ) ವಕ್ತಾರ ಕ್ಲೈಡೆ ಕಾಸ್ಟ್ರೊ ಮಾಡಿರುವ ವ್ಯಂಗ್ಯಚಿತ್ರದ ಟ್ವೀಟ್ ದೇಶದ ಗಮನ ಸೆಳೆದಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಎರಡೂ ಪಕ್ಷಗಳ ನಡುವೆ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ಆರಂಭವಾಗಿದೆ. ಬಿಜೆಪಿ-ಶಿವಸೇನಾ ನಾಯಕರು ಪರಸ್ಪರ ರಾಜಕೀಯ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ.

ಈ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಪ್ರತಿಪಕ್ಷ ಎನ್ ಸಿಪಿ ವ್ಯಂಗ್ಯಚಿತ್ರವನ್ನು ಟ್ವೀಟ್ ಮಾಡಿದೆ. ಬಿಜೆಪಿಯ ಮಿತ್ರಪಕ್ಷ ಶಿವಸೇನೆಯ ಚುನಾವಣಾ ಗುರುತು ಬಿಲ್ಲುಬಾಣ. ಬಿಲ್ಲಿಗೆ ಹೂಡಿರುವ ಬಾಣವು ನೇರವಾಗಿ ಬಿಜೆಪಿಯ ಗುರುತು ಕಮಲಕ್ಕೆ ಗುರಿಯಿಟ್ಟಿದೆ. ಬಿಲ್ಲಿನಿಂದ ಬಾಣ ಚಿಮ್ಮಿದರೆ ಕಮಲ ಛಿದ್ರವಾಗುತ್ತೆ ಎನ್ನುವುದನ್ನು ಈ ವ್ಯಂಗ್ಯಚಿತ್ರ ಪರೋಕ್ಷವಾಗಿ ಸೂಚಿಸುತ್ತಿದೆ. ವ್ಯಂಗ್ಯಚಿತ್ರದ ಜೊತೆಗೆ ಹಾಕಿರುವ ಒಕ್ಕಣೆಯಲ್ಲಿ ಕ್ರಾಸ್ಟೊ, 'ನಿಮ್ಮ ತಲೆ ಮೇಲೆ ಕತ್ತಿ ತೂಗುತ್ತಿದೆ' ಎಂದು ಮರಾಠಿಯಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.