ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರನ್ನು ಟೀಕಿಸಿದ ಆರೋಪದಡಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿ ಆಯೋಗ ಶುಕ್ರವಾರ ತಿಳಿಸಿದೆ.
.ಫೆಮ ಉಲ್ಲಂಘನೆ ಆರೋಪ: ಮಹುವಾ ಮೊಯಿತ್ರಾ, ಹೀರಾನಂದಾನಿಗೆ ಇ.ಡಿ ಸಮನ್ಸ್.
ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಕಾಲ್ತುಳಿತದ ನಡೆದ ಸ್ಥಳಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಬರುವ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದ ಮೊಯಿತ್ರಾ, ‘ತಮ್ಮ ಬಾಸ್‌ನ ಪೈಜಾಮಾ ಹಿಡಿದುಕೊಳ್ಳುವುದರಲ್ಲೇ ಅವರು ತುಂಬಾ ಮಗ್ನರಾಗಿದ್ದಾರೆ’ ಎಂದು ಬರೆದಿಕೊಂಡಿದ್ದರು.

‘ಈ ಬಗ್ಗೆ ದೆಹಲಿ ಪೊಲೀಸರಿಗೆ ದೂರು ನೀಡಲಾಗಿದೆ. ಲೋಕಸಭಾ ಸ್ಪೀಕರ್ ಅವರಿಗೂ ಪತ್ರ ಬರೆಯಲಾಗಿದ್ದು, ಮೊಯಿತ್ರಾ ಅವರ ಹೇಳಿಕೆಯನ್ನು ಕಟು ಶಬ್ದಗಳಿಂದ ಟೀಕಿಸಬೇಕಾಗಿದೆ. ಸಂಸದರಿಗೆ ಈ ಹೇಳಿಕೆ ತಕ್ಕುದಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಮಹಿಳಾ ಆಯೋಗ ಹೇಳಿದೆ.
.ಕಾಸಿಗಾಗಿ ಪ್ರಶ್ನೆ: ಮಹುವಾ ಮೊಯಿತ್ರಾ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ.
ಆಯೋಗದ ಈ ಪ್ರಕಟಣೆಗೆ ಉತ್ತರಿಸಿರುವ ಮಹುವಾ, ‘ಈ ಸ್ವಯಂ ಪ್ರೇರಿತ ಆದೇಶದ ಬಗ್ಗೆ ಶೀಘ್ರವೇ ಕ್ರಮ ತೆಗೆದುಕೊಳ್ಳಿ’ ಎಂದು ದೆಹಲಿ ಪೊಲೀಸರಿಗೆ ಎಕ್ಸ್‌ನಲ್ಲಿ ಟ್ಯಾಗ್ ಮಾಡಿದ್ದಾರೆ. ‘ನಾನು ನಾಡಿಯಾದಲ್ಲಿದ್ದೇನೆ. ಮುಂದಿನ ಮೂರು ದಿನಗಳಲ್ಲಿ ಬೇಕಿದ್ದರೆ, ಬೇಗನೇ ಬಂಧಿಸಿ’ ಎಂದು ಹೇಳಿದ್ದಾರೆ.

ಮಹುವಾ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಮಹಿಳಾ ಆಯೋಗವು ಒತ್ತಾಯಿಸಿದೆ.
.ಲೋಕಸಭೆಯಿಂದ ಉಚ್ಚಾಟನೆ | ಹಲವು ಏಳು–ಬೀಳು ಕಂಡ ಮಹುವಾ ಮೊಯಿತ್ರಾ.
‘ಈ ಟೀಕೆಗಳು ಅತಿರೇಕ ಮಾತ್ರವಲ್ಲದೆ, ಮಹಿಳೆಯ ಘನತೆಯ ಹಕ್ಕಿನ ತೀವ್ರ ಉಲ್ಲಂಘನೆಯಾಗಿದೆ’ ಎಂದೂ ಅದು ಹೇಳಿದೆ.

ಮಹುವಾ ಅವರ ಹೇಳಿಕೆಯು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 79ರಡಿ ಅಪರಾಧವಾಗಿದ್ದು, ಎಫ್‌ಐಆರ್ ದಾಖಲಿಸಬೇಕು ಎಂದು ದೆಹಲಿ ಪೊಲೀಸರಿಗೆ ಬರೆದ ಪತ್ರದಲ್ಲಿ ಮಹಿಳಾ ಆಯೋಗವು ಆಗ್ರಹಿಸಿದೆ.
.12 ಸಾವಿರಕ್ಕೂ ಹೆಚ್ಚು ದೂರು ಸ್ವೀಕರಿಸಿದ ಮಹಿಳಾ ಆಯೋಗ: ಈ ರಾಜ್ಯದಲ್ಲೇ ಅಧಿಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.