‘ಜೂನ್ 23ರ ಮರುಪರೀಕ್ಷೆಗೆ ತಡೆಯಾಜ್ಞೆಗೂ ನಕಾರ’
ಕೃಪಾಂಕ ರದ್ದತಿ ಬಳಿಕ 1563 ಅಭ್ಯರ್ಥಿಗಳಿಗೆ ನಡೆಸಲು ಉದ್ದೇಶಿರುವ ನೀಟ್ –ಯುಜಿ ಮರುಪರೀಕ್ಷೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ‘ಅರ್ಜಿದಾರರು ಈ ವಿಚಾರಣೆಯ ಅಂತಿಮ ತೀರ್ಮಾನದವರೆಗೆ ಕಾಯಬೇಕು. ಒಂದು ವೇಳೆ ಅವರಿಗೆ ಜಯ ಲಭಿಸಿದಲ್ಲಿ ಇಡೀ ಪರೀಕ್ಷಾ ಪ್ರಕ್ರಿಯೆಯೇ ರದ್ದಾಗಲಿದೆ’ ಎಂದು ಹೇಳಿತು. ‘ನೀಟ್ ಯುಜಿ’ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ಎಸ್.ವಿ.ಎನ್.ಭಟ್ಟಿ ಅವರಿದ್ದ ಪೀಠ ಈ ಮಾತು ಹೇಳಿತು.