ಗುಮ್ಲಾ(ಜಾರ್ಖಂಡ್): ‘ದೇಶದ ಅಭಿವೃದ್ಧಿಗಾಗಿ ಹಲವಾರು ಜನರು ಒಗ್ಗಟ್ಟಾಗಿ ದುಡಿಯುತ್ತಿದ್ದಾರೆ. ಹೀಗಾಗಿ, ದೇಶದ ಭವಿಷ್ಯದ ಬಗ್ಗೆ ನನಗೆ ಯಾವುದೇ ಅಭದ್ರತೆ ಕಾಡುತ್ತಿಲ್ಲ’ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.

ಜಾರ್ಖಂಡ್ನ ಗುಮ್ಲಾದಲ್ಲಿ ‘ವಿಕಾಸ ಭಾರತಿ’ ಸಂಸ್ಥೆ ಆಯೋಜಿಸಿದ್ದ ಗ್ರಾಮ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದ ಭವಿಷ್ಯದ ಬಗ್ಗೆ ನನಗೆ ಯಾವುದೇ ಅನುಮಾನಗಳಿಲ್ಲ. ಒಳ್ಳೆಯ ಕಾರ್ಯಗಳು ನಡೆಯಬೇಕಿದೆ ಹಾಗೂ ಹಲವಾರು ಜನರು ಪ್ರಚಾರದ ಗೀಳಿಲ್ಲದೆ ತಮ್ಮಷ್ಟಕ್ಕೆ ತಾವು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ನಾವು ಕೂಡ ನಮ್ಮ ಪ್ರಯತ್ನಗಳನ್ನು ಮಾಡುತ್ತಿದ್ದೇವೆ’ ಎಂದರು.

ನಾವು 33 ಕೋಟಿ ದೇವಾನುದೇವತೆಗಳನ್ನು ಹೊಂದಿರುವಂತೆಯೇ ವಿವಿಧ ರೀತಿಯ ಆಚರಣೆಗಳನ್ನೂ ಹೊಂದಿದ್ದೇವೆ. ದೇಶದ ಜನರು 3,800 ಭಾಷೆಗಳಲ್ಲಿ ಮಾತನಾಡುತ್ತಾರೆ. ಆಹಾರ ಸೇವನೆ ಪದ್ಧತಿಯೂ ವೈವಿಧ್ಯಮಯವಾಗಿದೆ. ಸಂಸ್ಕೃತಿ ಮತ್ತು ಆಚರಣೆಯಲ್ಲಿ ಇಷ್ಟೆಲ್ಲಾ ವ್ಯತ್ಯಾಸಗಳಿದ್ದರೂ, ನಮ್ಮೆಲ್ಲರ ಮನಸ್ಸು ಒಂದೇ ಆಗಿದೆ. ಭಾರತ ಹೊರತುಪಡಿಸಿ, ವಿಶ್ವದ ಯಾವುದೇ ದೇಶದಲ್ಲಿಯೂ ಇಂತಹ ವಿಶೇಷತೆಯನ್ನು ಕಾಣಲಾಗದು ಎಂದು ಅವರು ಪ್ರತಿಪಾದಿಸಿದ್ದಾರೆ.

ಭಾರತೀಯ ಸಂಸ್ಕೃತಿಯ ಪ್ರತೀಕವೆಂಬಂತೆ, ಈಚೆಗೆ ಪ್ರಗತಿಪರ ಜನರೂ ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗುತ್ತಿದ್ದಾರೆ. ಈ ಬಗ್ಗೆ ಯಾವುದೇ ಧರ್ಮಗ್ರಂಥದಲ್ಲಿ ಬರೆಯದಿದ್ದರೂ, ಸಮಾಜಕ್ಕೆ ಕೊಡುಗೆ ನೀಡಬೇಕೆಂಬುದು ಭಾರತೀಯರಲ್ಲಿ ಪೀಳಿಗೆಯಿಂದ ಪೀಳಿಗೆಗೆ ಹುಟ್ಟುಗುಣವಾಗಿ ಹರಿದುಬಂದಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.