ನವದೆಹಲಿ(ಪಿಟಿಐ): ಖಾಲಿಸ್ತಾನಿ ಉಗ್ರ ಅರ್ಶದೀಪ್ ಸಿಂಗ್ ಡಾಲಾ ಅಲಿಯಾಸ್ ಅರ್ಶ್ ಡಾಲಾ ಸಹಚರನೊಬ್ಬನನ್ನು ಎನ್ಐಎ ಅಧಿಕಾರಿಗಳು ದೆಹಲಿ ವಿಮಾನನಿಲ್ದಾಣದಲ್ಲಿ ಗುರುವಾರ ಬಂಧಿಸಿದ್ದಾರೆ.

ಬಲ್ಜೀತ್ ಸಿಂಗ್ ಅಲಿಯಾಸ್ ಬಲ್ಜೀತ್ ಮೌರ್ ಬಂಧಿತ. ಈತ ಪಂಜಾಬ್ನ ಬಠಿಂಡಾ ನಿವಾಸಿ.

ಯುಎಇಯಿಂದ ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದ ಬಲ್ಜೀತ್ ಸಿಂಗ್ ಅವರನ್ನು ಎನ್ಐಎ ವಶಕ್ಕೆ ಪಡೆಯಿತು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಅರ್ಶ್ ಡಾಲಾ ನೇತೃತ್ವದ, ನಿಷೇಧಿತ ಖಾಲಿಸ್ತಾನ್ ಭಯೋತ್ಪದಕ ಪಡೆಗೆ (ಕೆಟಿಎಫ್) ಸಾಗಣೆ ಸೌಕರ್ಯ, ಸುಲಿಗೆ ಮಾಡುವುದಕ್ಕಾಗಿ ವ್ಯಕ್ತಿಗಳನ್ನು ಗುರುತಿಸುವುದು ಹಾಗೂ ಕಾರ್ಯಕರ್ತರ ನೇಮಕ ಹಾಗೂ ಸಂಘಟನೆಯ ಸದಸ್ಯರಿಗೆ ಹಣಕಾಸು ನೆರವು ಒದಗಿಸುವಲ್ಲಿ ಬಲ್ಜೀತ್ ನಿರತನಾಗಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಅರ್ಶ್ ವಿರುದ್ಧ ಫೆಬ್ರುವರಿಯಲ್ಲಿ ಲುಕ್ಔಟ್ ನೋಟಿಸ್, ಜೂನ್ನಲ್ಲಿ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.