ಜಮ್ಮು: ಗಡಿಯಲ್ಲಿ ಭಯೋತ್ಪಾದಕರ ನುಸುಳುವಿಕೆ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಹಲವೆಡೆ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಇಂದು (ಗುರುವಾರ) ದಾಳಿ ನಡೆಸಿದೆ.

ರಿಯಾಸಿ, ಉಧಮ್ಪುರ ಹಾಗೂ ರಾಂಬನ್ ಸೇರಿದಂತೆ ಜಮ್ಮು ಪ್ರದೇಶದ ಒಂಬತ್ತು ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಮೂಲದ ಭಯೋತ್ಪಾದಕರ ನುಸುಳುವಿಕೆಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿದ ಬಳಿಕ ಎನ್ಐಎ ಕಾರ್ಯಾಚರಣೆ ನಡೆಸುತ್ತಿದೆ.

ಈ ಕಾರ್ಯಾಚರಣೆಯಲ್ಲಿ ಎನ್ಐಎಗೆ ಸ್ಥಳೀಯ ಪೊಲೀಸರು ಮತ್ತು ಸಿಆರ್ಪಿಎಫ್ ಸಿಬ್ಬಂದಿ ಸಾಥ್ ನೀಡಿದ್ದಾರೆ. ಭಯೋತ್ಪಾದನೆಗೆ ಸಂಬಂಧಿಸಿದ ಜಾಲವನ್ನು ಮಟ್ಟ ಹಾಕುವುದೇ ದಾಳಿ ಹಿಂದಿನ ಗುರಿಯಾಗಿದೆ.

ರಿಯಾಸಿ, ಡೋಡ, ಉಧಮ್ಪುರ, ರಂಬಾನ್ ಮತ್ತು ಕಿಶ್ತ್ವಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಎನ್ಐಎ ದಾಳಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
.ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ: ಅಮಿತ್ ಶಾ ಹೇಳಿಕೆಗೆ ಖರ್ಗೆ ಟೀಕೆ.ಜಮ್ಮು-ಕಾಶ್ಮೀರ: ಸತತ 3ನೇ ದಿನವೂ ಕಲಾಪದಲ್ಲಿ ಗದ್ದಲ, ಎಳೆದಾಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.