ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್ಎಂಸಿ) ತನ್ನ ನಿಯಂತ್ರಣದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ ಕೋರ್ಸ್ ಆರಂಭಿಸಲಿದೆ. ಸಂಶೋಧನೆ ಹಾಗೂ ವೈದ್ಯ ವೃತ್ತಿಗೆ ಸಂಬಂಧಿಸಿದ ಕೆಲವು ಕೌಶಲಗಳನ್ನು ಬೆಳೆಸಲು ಈ ಕ್ರಮಕ್ಕೆ ಅದು ಮುಂದಾಗಿದೆ.

ಇದುವರೆಗೆ ವೈದ್ಯಕೀಯ ಸಂಸ್ಥೆಗಳು ವೈದ್ಯರ ತರಬೇತಿಯ ಉದ್ದೇಶದಿಂದ ಈ ಕೋರ್ಸ್ಗಳನ್ನು ತಮ್ಮ ಹಂತದಲ್ಲಿಯೇ ರೂಪಿಸಿ, ಅನುಮೋದನೆ ನೀಡುತ್ತಿದ್ದವು. ‘ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ನಿಯಮ – 2023’ಅನ್ನು ಈಚೆಗೆ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಇದರ ಅನ್ವಯ, ವೈದ್ಯಕೀಯ ಕಾಲೇಜೊಂದಕ್ಕೆ ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಅನುಮತಿ ಸಿಕ್ಕಾಗ, ಅದು ಮಾನ್ಯತೆ ಪಡೆದಿದೆ ಎಂದು ಪರಿಗಣಿತವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.