1. ವಿಶ್ವನಾಥ ಪ್ರತಾಪ್ ಸಿಂಗ್
ಜನತಾ ದಳದಿಂದ ಪ್ರಧಾನಿಯಾಗಿದ್ದ ವಿಶ್ವನಾಥ್ ಪ್ರತಾಪ್ ಸಿಂಗ್ (ವಿ.ಪಿ ಸಿಂಗ್) ಅವರು 1989 ರಿಂದ 1990ರ ವರೆಗೆ ಅಧಿಕಾರದಲ್ಲಿದ್ದರು. ನ್ಯಾಷನಲ್ ಫ್ರಂಟ್ ಎನ್ನುವ ಹಲವು ಪಕ್ಷಗಳ ಒಕ್ಕೂಟದಿಂದ ಪ್ರಧಾನಿಯಾಗಿದ್ದರು. ಬಿಜೆಪಿ ಕೂಡ ಅವರಿಗೆ ಬೆಂಬಲ ನೀಡಿತ್ತು. ರಾಮ ಮಂದಿರ ವಿವಾದ ಸಂಬಂಧ ಅವರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಬಿಜೆಪಿ ಹಿಂಪಡೆಯಿತು. ವಿಶ್ವಾಸಮತ ಸಾಬೀತು ಪಡಿಸಲು ವಿ.ಪಿ ಸಿಂಗ್ ವಿಫಲರಾದರು. 142-346 ಮತಗಳಿಂದ ಸೋಲು ಅನುಭವಿಸಿ ಅಧಿಕಾರ ಕಳೆದುಕೊಂಡರು.