‘ಜಾಹೀರಾತು ಖರ್ಚು: ತನಿಖೆಯಾಗಲಿ’
ಕೋಚಿಂಗ್ ಸೆಂಟರ್ ಸಂಸ್ಕೃತಿಯನ್ನು ‘ಗ್ಯಾಸ್ ಚೇಂಬರ್’ ಎಂದು ಕರೆದಿರುವ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ತರಬೇತಿ ಕೇಂದ್ರಗಳು ಜಾಹೀರಾತುಗಳಿಗೆ ಖರ್ಚು ಮಾಡುವ ಅಪಾರ ಹಣದ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು. ‘ಕೋಚಿಂಗ್ ಸೆಂಟರ್ ಎಂಬುದು ಹೆಚ್ಚಿನ ಆದಾಯ ತಂದುಕೊಡುತ್ತಿದ್ದು ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮವಾಗಿ ಮಾರ್ಪಟ್ಟಿದೆ. ನಾವು ದಿನಪತ್ರಿಕೆ ಓದುವಾಗ ಅವುಗಳ ಮುಖಪುಟ ಸೇರಿದಂತೆ ಒಂದೆರಡು ಪುಟಗಳಲ್ಲಿ ಕೋಚಿಂಗ್ ಸೆಂಟರ್‌ಗಳ ಜಾಹೀರಾತು ನೋಡುತ್ತೇವೆ. ಜಾಹೀರಾತಿಗೆ ಖರ್ಚು ಮಾಡುವ ಪ್ರತಿ ಪೈಸೆಯೂ ವಿದ್ಯಾರ್ಥಿಗಳಿಂದ ಬರುತ್ತದೆ’ ಎಂದರು.