ನವದೆಹಲಿ: ಉಪಗ್ರಹ ಚಿತ್ರ (ಸ್ಯಾಟಲೈಟ್ ಇಮೇಜಿಂಗ್) ನೆರವಿನೊಂದಿಗೆ ಈಶಾನ್ಯ ರಾಜ್ಯಗಳ ಗಡಿ ಗುರುತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೆಲವೊಂದು ಸಂದರ್ಭಗಳಲ್ಲಿ ಹಿಂಸಾಚಾರಕ್ಕೂ ಕಾರಣವಾಗಿರುವ ಅಂತರ ರಾಜ್ಯ ಗಡಿ ವಿವಾದಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ.

ಗಡಿ ಗುರುತಿಸುವಿಕೆ ಹೊಣೆಗಾರಿಕೆಯನ್ನು ಈಶಾನ್ಯ ಮಂಡಳಿ (ಎನ್‌ಇಸಿ) ಮತ್ತು ಬಾಹ್ಯಾಕಾಶ ಇಲಾಖೆಯ (ಡಿಒಎಸ್) ಜಂಟಿ ಉಪಕ್ರಮವಾಗಿರುವ ‘ಈಶಾನ್ಯ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರಕ್ಕೆ (ಎನ್‌ಇಎಸ್‌ಎಸಿ)’ ವಹಿಸಲಾಗಿದೆ ಎಂದು ಸರ್ಕಾರದ ಇಬ್ಬರು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ:ಅಸ್ಸಾಂ ಸಿ.ಎಂ ವಿರುದ್ಧ ಪ್ರಕರಣ ಹಿಂಪಡೆಯಲು ಸಿದ್ಧ: ಮಿಜೋರಾಂ ಸರ್ಕಾರ

ಸುಧಾರಿತ ಬಾಹ್ಯಾಕಾಶ ತಂತ್ರಜ್ಞಾನ ಬೆಂಬಲ ನೀಡುವ ಮೂಲಕ ಈಶಾನ್ಯ ಪ್ರದೇಶದ ಅಭಿವೃದ್ಧಿ ಪ್ರಕ್ರಿಯೆಯನ್ನು ಹೆಚ್ಚಿಸಲು ಎನ್‌ಇಎಸ್‌ಎಸಿ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

ಅಸ್ಸಾಂ ಮತ್ತು ಮಿಜೋರಾಂ ನಡುವಣ ಗಡಿ ವಿವಾದ ಉಲ್ಬಣಿಸಿರುವುದರಿಂದ ಅಂತರ ರಾಜ್ಯ ಗಡಿ ವಿವಾದಗಳು ದೇಶದ ಗಮನ ಸೆಳೆದಿವೆ.

ಉಪಗ್ರಹ ಚಿತ್ರದ ನೆರವಿನೊಂದಿಗೆ ಅಂತರ ರಾಜ್ಯ ಗಡಿಗಳನ್ನು ಗುರುತಿಸುವ ಕಲ್ಪನೆಯನ್ನು ಕೆಲವು ತಿಂಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಸ್ತಾಪಿಸಿದ್ದರು.

ಓದಿ:ಅಸ್ಸಾಂ–ಮಿಜೋರಾಂ ಗಡಿ ವಿವಾದ: ಸಿಎಂ ಹಿಮಂತ ಬಿಸ್ವ, ಇತರ 6 ಮಂದಿ ವಿರುದ್ಧ ಪ್ರಕರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.