ಕೇಂದ್ರಾಪರ: ಚಂಡಮಾರುತ ಫೋನಿ ಅಬ್ಬರಕ್ಕೆ ಮನೆ ಕಳೆದುಕೊಂಡ ದಲಿತ ಕುಟುಂಬಅನಿವಾರ್ಯವಾಗಿ ಶೌಚಾಲಯದಲ್ಲಿ ವಾಸಿಸುವ ಸ್ಥಿತಿ ನಿರ್ಮಾಣವಾಗಿದೆ.

ಮೇ 3ರಂದು ಫೋನಿ ಒಡಿಶಾಗೆ ಅಪ್ಪಳಿಸಿತ್ತು. ಬಿರುಗಾಳಿಗೆಕೇಂದ್ರಾಪರ ಜಿಲ್ಲೆಯ ರಾಘುದೈಪುರ್ ಹಳ್ಳಿಯ ದಿನಗೂಲಿ ನೌಕರಖಿರೋದ್ ಜೀನ ವಾಸಿಸುತ್ತಿದ್ದ ಕಚ್ಚಾ ಮನೆ ಕುಸಿದುಬಿದ್ದಿತ್ತು. ಆದರೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ನಿರ್ಮಾಣಗೊಳಿಸಿದ್ದ ಪಕ್ಕಾ ಶೌಚಾಲಯಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಮನೆ ಕಳೆದುಕೊಂಡ ಖಿರೋದ್ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜತೆ6 ಅಡಿ ಅಗಲದ ಶೌಚಾಲಯದಲ್ಲೇ ಜೀವನ ಸಾಗಿಸುತ್ತಿದ್ದಾರೆ.

‘ಚಂಡ ಮಾರುತ ನನ್ನ ಜೀವನವನ್ನೇ ಛಿದ್ರ ಗೊಳಿಸಿದೆ. ಹೊಸ ಮನೆ ಕಟ್ಟಲು ಹಣವಿಲ್ಲ. 2 ವರ್ಷದ ಹಿಂದೆ ಮನೆಯ ಆವರಣದಲ್ಲಿಶೌಚಾಲಯ ನಿರ್ಮಾಣ ಮಾಡಲಾಗಿತ್ತು.ಬೇರೆ ಯಾವ ಆಯ್ಕೆಯೂ ಇಲ್ಲದೇ ಇಲ್ಲೇ ವಾಸಿಸುತ್ತಿದ್ದೇವೆ. ಮನೆ ಕಟ್ಟಲು ಸರ್ಕಾರಪರಿಹಾರ ನೀಡುವವರೆಗೂ ಶೌಚಾಲಯವೇ ಮನೆಯಾಗಿರಲಿದೆ. ಬಹಿರ್ದೆಸೆಗೆ ಅನಿವಾರ್ಯವಾಗಿ ಬಯಲಿಗೆ ಹೋಗುತ್ತಿದ್ದೇವೆ’ಎಂದು ಜೀನ ತಿಳಿಸಿದರು.

‘ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ಬಿಜು ಪಕ್ಕಾ ಮನೆ ಯೋಜನೆಯಡಿ ಮನೆ ನಿರ್ಮಿಸಲು ಧನಸಹಾಯ ಕೋರಿದ್ದೆ. ಆದರೆ ಈ ಧನಸಹಾಯ ದೊರಕಿರಲಿಲ್ಲ. ಪಕ್ಕಾ ಮನೆ ನಿರ್ಮಾಣವಾಗಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ’ ಎಂದು ಜೀನ ಮರುಗಿದರು.

ದಲಿತ ಕುಟುಂಬವೊಂದು ಶೌಚಾಲಯದಲ್ಲಿ ವಾಸಿಸುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರ ಪರಿಹಾರ ಮತ್ತು ಗೃಹ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು.
–ದಿಲೀಪ್ ಕುಮಾರ್ ಪರಿದ, ಯೋಜನಾ ನಿರ್ದೇಶಕ, ಡಿಆರ್ಡಿಎ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.