ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸತ್‌ ಭವನ ದೇಶಕ್ಕೆ ಅರ್ಪಣೆ: ಪ್ರಧಾನಿ ನರೇಂದ್ರ ಮೋದಿ

Published : 28 ಮೇ 2023, 17:05 IST
Last Updated : 28 ಮೇ 2023, 17:05 IST
ಫಾಲೋ ಮಾಡಿ
Comments
ಸಮಾರಂಭದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳನ್ನು ನೋಡಿದರೆ ದೇಶವನ್ನು ಹಲವು ಶತಮಾನಗಳ ಹಿಂದಕ್ಕೆ ಒಯ್ಯುವಂತೆ ತೋರುತ್ತಿದೆ. ವಿಜ್ಞಾನದ ಕುರಿತು ಯಾವುದೇ ರಾಜಿ ಸಲ್ಲ. ಸಮಾಜವನ್ನು ವೈಜ್ಞಾನಿಕ ಮನೋಭಾವದೊಂದಿಗೆ ನಿರ್ಮಿಸುವ ಕುರಿತು ನೆಹರೂ ಅವರು ಶ್ರಮಪಟ್ಟಿದ್ದರು. ಆದರೆ ಈಗ ಆಗುತ್ತಿರುವುದು ಇದಕ್ಕೆ ವಿರುದ್ಧವಾದುದು .
ಶರದ್‌ ಪವಾರ್‌, ಎನ್‌ಸಿಪಿ ಮುಖ್ಯಸ್ಥ
ಪ್ರತಿ ದೇಶದ ಇತಿಹಾಸದಲ್ಲೂ ಕೆಲವೇ ಘಟನೆಗಳು ಅಮರವಾಗುತ್ತವೆ. ಕೆಲವು ದಿನಾಂಕಗಳು ‘ಅಮರತ್ವದ ಚಿಹ್ನೆ’ಗಳಾಗುತ್ತವೆ. 2023ರ ಮೇ 28 ಕೂಡ ಇಂತಹದೇ ದಿನವಾಗಿದೆ ನರೇಂದ್ರ ಮೋದಿ ಪ್ರಧಾನಿ ರಾಷ್ಟ್ರಪತಿಯಿಂದ ಉದ್ಘಾಟನೆಯ ಹಕ್ಕನ್ನು ಕಿತ್ತುಕೊಳ್ಳಲಾಯಿತು. ಮಹಿಳಾ ಕುಸ್ತಿಪಟುಗಳಿಗೆ ಸರ್ವಾಧಿಕಾರಿ ಧೋರಣೆಯೊಂದಿಗೆ ರಸ್ತೆಯಲ್ಲಿ ಹೊಡೆಯಲಾಯಿತು. ಅಲ್ಲಿಗೆ ಪ್ರಜಾಪ್ರಭುತ್ವ ರಾಷ್ಟ್ರೀಯತೆ ಹೆಣ್ಣುಮಕ್ಕಳನ್ನು ಉಳಿಸಿ ಎಂಬ ಬಿಜೆಪಿ–ಆರ್‌ಎಸ್‌ಎಸ್‌ನ ಮೂರು ಸುಳ್ಳು ಸಿದ್ಧಾಂತಗಳು ದೇಶದೆದುರು ನಗ್ನವಾದವು
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ನೂತನ ಸಂಸತ್‌ ಭವನದ ಉದ್ಘಾಟನೆಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಸೆಂಗೋಲ್‌’ ಅನ್ನು ಪ್ರತಿಷ್ಠಾಪಿಸುವ ಮುನ್ನ– ಪಿಟಿಐ ಚಿತ್ರ
ನೂತನ ಸಂಸತ್‌ ಭವನದ ಉದ್ಘಾಟನೆಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಸೆಂಗೋಲ್‌’ ಅನ್ನು ಪ್ರತಿಷ್ಠಾಪಿಸುವ ಮುನ್ನ– ಪಿಟಿಐ ಚಿತ್ರ
‘ಸೆಂಗೋಲ್‌’ ಅನ್ನು ಪ್ರತಿಷ್ಠಾಪಿಸುವ ವೇಳೆ ಮೋದಿ ಅವರು ಗಣರಾಜ್ಯದ ಅಡಿಪಾಯವನ್ನೇ ಮರೆತರು. ಸಂವಿಧಾನದ ಶಿಲ್ಪಿಯಾದ ಅಂಬೇಡ್ಕರ್‌ ಅವರ ಹೆಸರನ್ನು ಮೋದಿ ಎಲ್ಲೂ ಪ್ರಸ್ತಾಪಿಸಲಿಲ್ಲ
ಡಿ. ರಾಜ ಸಿಪಿಐ
ರಾಷ್ಟ್ರಪತಿ ಉಪರಾಷ್ಟ್ರಪತಿ ಮತ್ತು ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ‘ನವ ಭಾರತ’ದ ಘೋಷಣೆ ಮಾಡಲಾಗಿದೆ. ಭಾರತ ಅಂದರೆ ದೇಶ ಮತ್ತು ನಾಗರಿಕರು; ನವ ಭಾರತ ಎಂದರೆ ರಾಜ ಮತ್ತು ಪ್ರಜೆ
ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ
‘ನನ್ನನ್ನು ನಾನೇ ಪ್ರೀತಿಸುವ ದಿನ’ವನ್ನು ಮೋದಿ ಅವರು ಆಚರಿಸಿಕೊಂಡಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಹಾಗೂ ಅವರ ಸರ್ಕಾರವು ಸಂಸತ್ತನ್ನು ಹೇಗೆಲ್ಲಾ ಅವಮಾನಿಸಿದೆ ಲೇವಡಿ ಮಾಡಿದೆ ಎನ್ನುವುದನ್ನು ನೆನಪಿಸಬೇಕು.
ಡೆರೆಕ್‌ ಒಬ್ಯಾನ್, ಟಿಎಂಸಿ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT