ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PM–ಕಿಸಾನ್ ಹಣ ಬಿಡುಗಡೆ; ಮಹಾರಾಷ್ಟ್ರಕ್ಕೆ ₹ 23,000 ಮೊತ್ತದ ಯೋಜನೆ ನೀಡಿದ ಮೋದಿ

Published : 5 ಅಕ್ಟೋಬರ್ 2024, 9:53 IST
Last Updated : 5 ಅಕ್ಟೋಬರ್ 2024, 9:53 IST
ಫಾಲೋ ಮಾಡಿ
Comments

ವಾಶಿಮ್‌ (ಮಹಾರಾಷ್ಟ್ರ): ಕೃಷಿ ಹಾಗೂ ಪಶು ಸಂಗೋಪನೆಗೆ ಸಂಬಂಧಿಸಿದ ಸುಮಾರು ₹ 23,000 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಾಶಿಮ್‌ನಲ್ಲಿ ಶನಿವಾರ ಚಾಲನೆ ನೀಡಿದರು.

ಮಹಾರಾಷ್ಟ್ರಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿರುವ ಮೋದಿ, ಇಂದು ಬೆಳಿಗ್ಗೆ ನಾಂದೇಡ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ವಾಶಿಮ್‌ ತಲುಪಿದ ಅವರು, ಇಲ್ಲಿನ ಪೊಹರಾದೇವಿ ಗ್ರಾಮದಲ್ಲಿರುವ ಜಗದಾಂಬ ಮಠದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ, ಸಂತ ಸೇವಾಲಾಲ್‌ ಮಹಾರಾಜ್‌ ಮತ್ತು ಸಂತ ರಾಮರಾವ್‌ ಮಹರಾಜರ ಸಮಾಧಿಗಳಿಗೆ ಗೌರವ ನಮನ ಸಲ್ಲಿಸಿದರು.

ಬಂಜಾರ ವಿರಾಸತ್‌ ವಸ್ತುಸಂಗ್ರಹಾಲಯ ಉದ್ಘಾಟಿಸಿದ ಪ್ರಧಾನಿ, ಬಂಜಾರ ಸಮುದಾಯದ ಪರಂಪರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ನಡೆದ ಸಮಾರಂಭದಲ್ಲಿ, ಕೃಷಿ ಹಾಗೂ ಪಶು ಸಂಗೋಪನೆ ಸಂಬಂಧಿತ ಯೋಜನೆಗಳಿಗೆ ಚಾಲನೆ ನೀಡಿದರು.

ಇದೇ ವೇಳೆ, ಸುಮಾರು 9.4 ಕೋಟಿ ರೈತರ ಖಾತೆಗಳಿಗೆ 'ಪಿಎಂ–ಕಿಸಾನ್‌ ಸಮ್ಮಾನ್‌ ನಿಧಿ'ಯ 18ನೇ ಕಂತಿನ ₹ 20,000 ಕೋಟಿ ಬಿಡುಗಡೆ ಮಾಡಿದರು. ಹಾಗೆಯೇ, ಮಹಾರಾಷ್ಟ್ರ ರೈತರಿಗಾಗಿ ನೀಡುವ 'ನಮೋ ಶೇಟ್ಕರಿ ಮಹಾಸನ್ಮಾನ್‌ ನಿಧಿ ಯೋಜನೆ'ಯ 5ನೇ ಕಂತಿನ ₹ 2,000 ಕೋಟಿಯನ್ನೂ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT