ನವದೆಹಲಿ: ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (ಪಿಎಂ–ಕಿಸಾನ್) ಯೋಜನೆಯಡಿ 8ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದ್ದಾರೆ.

ಸುಮಾರು ₹20 ಸಾವಿರ ಕೋಟಿ ಮೊತ್ತ ಬಿಡುಗಡೆ ಮಾಡಲಾಗಿದ್ದು, 9.5 ಕೋಟಿಗೂ ಹೆಚ್ಚುರೈತರಿಗೆ ಇದರ ಪ್ರಯೋಜನ ದೊರೆಯಲಿದೆ.

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಹ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿ, ಪಶ್ಚಿಮ ಬಂಗಾಳವೂ ಯೋಜನೆಯಲ್ಲಿ ಸೇರಿಕೊಂಡಿದೆ. ಬಂಗಾಳದ 7 ಲಕ್ಷಕ್ಕೂ ಹೆಚ್ಚು ರೈತರಿಗೆ ಯೋಜನೆಯ ಪ್ರಯೋಜನ ದೊರೆಯುತ್ತಿದೆ ಎಂದು ಹೇಳಿದ್ದಾರೆ.

ಓದಿ:ಪ್ರಧಾನಿಯಿಂದ ಅಕ್ಷಯ ತೃತೀಯಾ, ಬಸವ ಜಯಂತಿ, ಈದ್ ಶುಭಾಶಯ

ಪಿಎಂ–ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರವು 14 ಕೋಟಿ ರೈತರಿಗೆ ವಾರ್ಷಿಕ ₹6,000 ನೀಡುತ್ತಿದೆ. ₹2,000ದಂತೆ ಮೂರು ಹಂತಗಳಲ್ಲಿ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.

ಹಣ ಬಿಡುಗಡೆ ಮಾಡಿದ ಬಳಿಕ ಮೋದಿ ಅವರು ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಮೇಘಾಲಯ, ಜಮ್ಮು–ಕಾಶ್ಮೀರ ಹಾಗೂ ಅಂಡಮಾನ್–ನಿಕೋಬಾರ್ ರೈತರ ಜತೆ ಸಂವಾದ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.