‘ಟಿಎಂಸಿ ಬೆದರಿಕೆ ತಂತ್ರ ಫಲಿಸಲಿಲ್ಲ’
‘ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಪ್ರತಿಪಕ್ಷಕ್ಕೆ ಭಯ ಹುಟ್ಟಿಸಲು ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ‘ಭಯ ಹುಟ್ಟಿಸುವ ಹಾಗೂ ಬೆದರಿಕೆ’ಯ ತಂತ್ರ ಅನುಸರಿಸಿತು’ ಎಂದು ಪ್ರಧಾನಿ ಮೋದಿ ಆಪಾದಿಸಿದರು. ಆದರೆ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಆಶೀರ್ವದಿಸಿದರು. ಇದರಿಂದ ಭಯದ ವಾತಾವರಣ ನಿರ್ಮಿಸುವ ಆಳ್ವಿಕೆಯ ಮೇಲಿನ ಟಿಎಂಸಿ ಹಿಡಿತವೂ ತಪ್ಪಿತು ಎಂದು ಹೇಳಿದರು. ‘ಬಂಗಾಳಿ ಜನರ ಪ್ರೀತಿಯು ಗೆಲುವನ್ನು ದಕ್ಕಿಸಿಕೊಟ್ಟಿತು. ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು ವಿಜಯೋತ್ಸವ ಆಚರಣೆಗೆ ಮುಂದಾಗಲಿಲ್ಲ. ಮೆರವಣಿಗೆ ಮುಂದಾದ ಕೆಲವರ ಮೇಲೆ ದಾಳಿಯೂ ನಡೆಯಿತು. ಇದೇ ಟಿಎಂಸಿಯ ರಾಜಕೀಯ’ ಎಂದು ದೂರಿದರು.