1999ರಲ್ಲಿ ಶಾಂತಿ ಸ್ಥಾಪಿಸಲು ಭಾರತ ಯತ್ನಿಸುತ್ತಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ತನ್ನ ವಿಶ್ವಾಸಘಾತುಕ ಮುಖ ತೋರಿಸಿತು.
–ನರೇಂದ್ರ ಮೋದಿ, ಪ್ರಧಾನಿ
ಪ್ರತಿಪಕ್ಷಗಳ ನಾಯಕರ ವಾದ
ಕಾರ್ಗಿಲ್ ವಿಜಯ ದಿವಸ ಸಂದರ್ಭದಲ್ಲಿಯೂ ಮೋದಿ ಸುಳ್ಳು ಹೇಳುತ್ತಿದ್ದಾರೆ. ಅಗ್ನಿಪಥ ಯೋಜನೆ ಜಾರಿಯು ಮೂರು ಪಡೆಗಳಿಗೆ ಅಚ್ಚರಿ ತಂದಿತ್ತು ಎಂಬುದಾಗಿ ಆಗಿನ ಸೇನೆ ಮುಖ್ಯಸ್ಥ ಎಂ.ಎಂ.ನರವಣೆ ಪತ್ರ ಬರೆದಿದ್ದರು.
–ಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಅಗ್ನಿವೀರರಿಗೆ ಯಾವುದೇ ಸಾಮಾಜಿಕ ಭದ್ರತೆ ಒದಗಿಸದ ಕಾರಣ ಅಗ್ನಿಪಥ ಯೋಜನೆ ಕುರಿತು ಪರಿಶೀಲನೆ ನಡೆಸಬೇಕು.
–ಮಹುವಾ ಮಾಜಿ, ಜೆಎಂಎಂ ಸಂಸದೆ
ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಒಪ್ಪಲಾಗದು. ಸೇನೆಯಲ್ಲಿ ಪೂರ್ಣಾವಧಿ ಕರ್ತವ್ಯ ನಿರ್ವಹಿಸಬೇಕು. ಅಗ್ನಿಪಥ ಯೋಜನೆ ಈ ವ್ಯವಸ್ಥೆಗೆ ಕೊನೆ ಹಾಡಲಿದೆ. ಯೋಜನೆ ವಿರುದ್ಧದ ನಮ್ಮ ಹೋರಾಟ ನಿಲ್ಲದು.
–ಡೋಲಾ ಸೇನ್, ಟಿಎಂಸಿಯ ರಾಜ್ಯಸಭಾ ಸಂಸದೆ
ಹಳೆಯ ನೇಮಕಾತಿ ಪದ್ಧತಿಯೇ ಉತ್ತಮ. ಅದು ಸೈನಿಕರಿಗೆ ಉತ್ತಮ ಭವಿಷ್ಯ ಹಾಗೂ ಅವರ ಕುಟುಂಬಗಳಿಗೆ ಭದ್ರತೆಯನ್ನು ಖಾತರಿಪಡಿಸುತ್ತಿತ್ತು.
–ಧರ್ಮೇಂದ್ರ ಯಾದವ್ ಸಮಾಜವಾದಿ ಪಕ್ಷ ನಾಯಕ
ಬಿಜೆಪಿ ಮುಖಂಡರ ಸಮರ್ಥನೆ
ಅಗ್ನಿಪಥ ಉತ್ತಮ ಯೋಜನೆ. ನನ್ನ ಮಗಳು ಕೂಡ ಸೇನೆ ಸೇರಲು ಸಿದ್ಧತೆ ನಡೆಸುತ್ತಿದ್ದಾಳೆ. ಯೋಜನೆ ಕುರಿತು ಯಾರೂ ಗೊಂದಲಕ್ಕೆ ಒಳಗಾಗಬಾರದು..
– ರವಿ ಕಿಶನ್ ಬಿಜೆಪಿ ಸಂಸದ
ಇಸ್ರೇಲ್‌ನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸೇನಾ ತರಬೇತಿ ಕಡ್ಡಾಯವಿರುವಂತೆ ಅಗ್ನಿಪಥ ಯೋಜನೆ ದೇಶದ ಯುವ ಜನರಲ್ಲಿ ರಾಷ್ಟ್ರಭಕ್ತಿ ತುಂಬುವ ಉದ್ದೇಶ ಹೊಂದಿದೆ.