ತಿರುವನಂತರಪುರ: ಮಲಯಾಳಂ ಭಾಷೆಯ ಖ್ಯಾತ ಕವಯತ್ರಿ ಹಾಗೂ ಪರಿಸರವಾದಿ ಸುಗತಕುಮಾರಿ (86) ಕೋವಿಡ್–19ನಿಂದಾಗಿ ಬುಧವಾರ ಸಾವನ್ನಪ್ಪಿದ್ದಾರೆ.

ಕೋವಿಡ್ ಪೀಡಿತರಾಗಿದ್ದ ಅವರು ಕೆಲ ದಿನಗಳಿಂದ ತಿರುವನಂತಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶ ಸಮಸ್ಯೆ ಹಾಗೂ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಮಂಗಳವಾರ ಹೃದಯಾಘಾತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಿಗ್ಗೆ ಅವರು ನಿಧನರಾದರು. ಸುಗತಕುಮಾರಿ ಅವರಿಗೆ ಪುತ್ರಿ ಲಕ್ಷ್ಮೀ ಇದ್ದಾರೆ.

1960ರಲ್ಲಿ ತಮ್ಮ ಕವಿತೆಗಳಿಂದ ಪ್ರವರ್ಧಮಾನಕ್ಕೆ ಬಂದಿದ್ದ ಸುಗತಕುಮಾರಿ, ನಂತರ ದಿನಗಳಲ್ಲಿ ಪರಿಸರವಾದಿಯಾಗಿ ಗುರುತಿಸಿಕೊಂಡಿದ್ದರು. 2006ರಲ್ಲಿ ಸುಗತ ಅವರಿಗೆ ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ ದೊರೆತಿತ್ತು. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶವಾಗದಂತೆ ತಡೆಯಲು ‘ಸೇವ್ ಸೈಲೆಂಟ್ ವ್ಯಾಲಿ’ ಚಳವಳಿಯ ನೇತೃತ್ವವನ್ನು ಸುಗತಕುಮಾರಿ ವಹಿಸಿಕೊಂಡಿದ್ದರು. ನಿರ್ಗತಿಕ ಮಹಿಳೆಯರು–ಮಕ್ಕಳು ಹಾಗೂ ಮಾನಸಿಕ ಅಸ್ವಸ್ಥರಾಗಿ ಅವರು ಅಭಯ ಮತ್ತು ಅಥಾನಿ ಹೆಸರಿನಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಗಳನ್ನೂ ಕೈಗೊಂಡಿದ್ದರು. ಕೇರಳ ಮಹಿಳಾ ಆಯೋಗದ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.