ನವದೆಹಲಿ, ಶ್ರೀನಗರ:ಜಮ್ಮು ಕಾಶ್ಮೀರದ ಅವೋಂತಿಪೊರದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಪಾರ್ಥಿವ ಶರೀಗಳನ್ನು ಅವರ ಹುಟ್ಟೂರುಗಳಿಗೆ ರವಾನಿಸಲಾಗುತ್ತಿದ್ದು, ಸ್ಥಳೀಯರು ಅತ್ಯಂತ ಗೌರವಪೂರ್ವಕವಾಗಿ ಸ್ವಾಗತಿಸುತ್ತಿದ್ದಾರೆ.

ಸ್ಥಳೀಯರು, ದೇಶಾಭಿಮಾನಿಗಳು ರಾಷ್ಟ್ರಧ್ವಜ ಹಿಡಿದು, ಯೋಧ ಅಮರ್ ರಹೇ ಎಂದು ಘೋಷಣೆ ಕೂಗುತ್ತಾ, ಕಂಬನಿ ಮಿಡಿಯುತ್ತಿದ್ದಾರೆ.

ಸ್ಥಳೀಯ ಜಿಲ್ಲಾಡಳಿಗಳು ಅಂತಿಮ ನಮನ ಸಲ್ಲಿಸಲು ವ್ಯವಸ್ಥೆ ಮಾಡಿವೆ. ಗಣ್ಯರು ಹಾಗೂ ಪೊಲೀಸರು ಅಂತಿಮ ಗೌರವ ಸಲ್ಲಿಸುತ್ತಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ

ಜಮ್ಮು ಮತ್ತು ಕಾಶ್ಮೀರದಲ್ಲಿ ಶುಕ್ರವಾರ ಪ್ರತಿಭಟನೆ ಹಿಂಸಾ ರೂಪ ಪಡೆದಿದ್ದರಿಂದಭದ್ರತೆಯನ್ನು ಹೆಚ್ಚಿಸಿಲಾಗಿದೆ. ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಯಕಟ್ಟಿನ ಸ್ಥಳಗಳಲ್ಲಿ ವಾಹಗಳನ್ನು, ಅನುಮಾಸ್ಪದ ವ್ಯಕ್ತಿಗಳನ್ನು ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ.

ತಂದೆಗೆ ಪುತ್ರಿಯ ಸಲ್ಯೂಟ್

ಡೆಹರಾಡೂನ್ನಲ್ಲಿ ಹುತಾತ್ಮ ಯೋಧ ಮೋಹನ್ ಲಾಲ್ ಅವರಿಗೆ ಅವರ ಪುತ್ರಿ ಅಂತಿಮನ ಸಲ್ಲಿಸಿ, ಸಲ್ಯೂಟ್ ಮಾಡಿದಕ್ಷಣ ಹೃದಯ ಕಲಕಿತ್ತು.

ಸಿಆರ್ಪಿಎಫ್ ಯೋಧ ವಾರಣಾಸಿ ಮೂಲಕದ ರಮೇಶ್ ಯಾದವ್ ಅವರ ಪಾರ್ಥಿವ ಶರೀರವನ್ನು ತೋಫಪುರಕ್ಕೆ ರವಾನಿಸಲಾಯಿತು.

ಸಿಆರ್ಪಿಎಫ್ ಯೋಧ ರೋಹಿತಾಶ್ ಲಂಬಾ ಅವರ ಪಾರ್ಥಿವ ಶರೀರವನ್ನು ರಾಜಸ್ಥಾನದ ಜೈಪುರದಲ್ಲಿನ ಅವರ ಸ್ಥಳೀಯ ನಿವಾಸಕ್ಕೆ ತರಲಾಯಿತು.

ಜಮ್ಮು ಕಾಶ್ಮೀರದ ಲೇಹ್ನಲ್ಲಿ ಡಲಾಕ್ ಬುದ್ಧಿಸ್ಟ್ ಅಸೋಸಿಯೇಷನ್ ವತಿಯಿಂದ ಮೆರವಣಿಗೆ ನಡೆಸುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು.

ಡೆಹರಾಡೂನ್ನಲ್ಲಿ ಉತ್ತರಾಖಂಡ್ನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಹುತಾತ್ಮ ಯೋಧ ಮೋಹನ್ ಲಾಲ್ ಅವರಿಗೆ ಅಂತಿಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.