ನವದೆಹಲಿ: ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡುತ್ತಿದ್ದ ರಿಯಾಯಿತಿಯನ್ನು ರೈಲ್ವೆ ಇಲಾಖೆ ನಿಲ್ಲಿಸಿರುವುದಕ್ಕೆ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಜಾಹೀರಾತು, ಉದ್ಯಮಿ ಮಿತ್ರರಿಗಾಗಿ ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡುವ ಸರ್ಕಾರದ ಬಳಿ ಹಿರಿಯ ನಾಗರಿಕರಿಗಾಗಿ ದುಡ್ಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:ರೈಲ್ವೆ ಪ್ರಯಾಣ ದರ: ಹಿರಿಯ ನಾಗರಿಕರಿಗೆ ರಿಯಾಯಿತಿ ಇಲ್ಲ

ಜಾಹೀರಾತಿಗಾಗಿ ₹911 ಕೋಟಿ ವ್ಯಯಿಸಲಾಗಿದೆ. ಹೊಸ ವಿಮಾನ ಖರೀದಿಗಾಗಿ ₹8,400 ಕೋಟಿ ಖರ್ಚು ಮಾಡಲಾಗಿದೆ. ಉದ್ಯಮಿ ಸ್ನೇಹಿತರಿಗೆ ತೆರಿಗೆಯಲ್ಲಿ ₹1,45,000 ಕೋಟಿ/ಸಾಲ ವಿನಾಯಿತಿ ನೀಡಲಾಗಿದೆ. ಆದರೆ ಸರ್ಕಾರದ ಬಳಿ ಹಿರಿಯ ನಾಗರಿಕರ ರೈಲು ಟಿಕೆಟ್‌ನಲ್ಲಿ ವಿನಾಯಿತಿ ನೀಡಲು ಬೇಕಾಗಿರುವ ₹1500 ಕೋಟಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಉದ್ಯಮಿ ಮಿತ್ರರಿಗಾಗಿ ಬೇಕಿದ್ದರೆ ನಕ್ಷತ್ರವನ್ನೇ ಕಿತ್ತು ತರುತ್ತಾರೆ. ಆದರೆ ನಾಗರಿಕರು ಚಿಲ್ಲರೆ ಕಾಸಿಗಾಗಿ ಪರಿತಪಿಸುವಂತೆ ಮಾಡುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.