ನವದೆಹಲಿ: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ 44 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಇಂದು (ಬುಧವಾರ) ಬಿಡುಗಡೆ ಮಾಡಿದೆ.

ಫುಲೇರಾ ಕ್ಷೇತ್ರದಿಂದ ವಿದ್ಯಾಧರ್ ಚೌಧರಿ, ಅಸಿಂದ್ ಕ್ಷೇತ್ರದಿಂದ ಲಾಲ್ ಮೇವಾರಾ ಮತ್ತು ಜಹಾಪುರ ಕ್ಷೇತ್ರದಿಂದ ಧೀರಜ್ ಗುರ್ಜರ್, ಪೋಕರನ್ ಕ್ಷೇತ್ರದಿಂದ ಸಲೇಹ್ ಮೊಹಮ್ಮದ್, ಜೈಸಲ್ಮೇರ್ ಕ್ಷೇತ್ರದಿಂದ ರೂಪರಾಮ್ ಮೇಘವಾಲ್ ಸ್ಫರ್ಧಿಸಲಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಬೆಂಬಲಿಗರಾದ ಶಾಂತಿ ಧರಿವಾಲ್, ಮಹೇಶ್ ಜೋಶಿ ಮತ್ತು ಧರ್ಮೇಂದ್ರ ರಾಥೋಡ್ ಟಿಕೆಟ್ ಕೈತಪ್ಪಿದೆ. ಇವರು ಕಳೆದ ವರ್ಷ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದರು. ಧರಿವಾಲ್ ಅವರು ಪುತ್ರನಿಗೆ ಟಿಕೆಟ್ ಬಯಸುತ್ತಿದ್ದಾರೆ ಎಂದು ವರದಿಯಾಗಿದೆ.

ಮೊದಲ ಪಟ್ಟಿಯಲ್ಲಿ 33, ಎರಡನೇ ಪಟ್ಟಿಯಲ್ಲಿ 43, ಮೂರನೇ ಪಟ್ಟಿಯಲ್ಲಿ 19 ಮತ್ತು ನಾಲ್ಕನೇ ಪಟ್ಟಿಯಲ್ಲಿ 56 ಮಂದಿ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿತ್ತು.

200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.