ಜೈಪುರ: ಸೇನಾ ಸಮವಸ್ತ್ರ ಮಾರಾಟದ ಅಂಗಡಿ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬೇಹುಗಾರಿಕೆ ನಡೆಸಿದ ಆರೋಪದ ಅಡಿಯಲ್ಲಿ ರಾಜಸ್ಥಾನ ಪೊಲೀಸ್‌ನ ಗುಪ್ತಚರ ತಂಡವು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಆನಂದ್ ರಾಜ್ ಸಿಂಗ್ (22) ಸೇನೆಯ ಕಾರ್ಯತಂತ್ರದ ಮಹತ್ವದ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಮೂವರು ಮಹಿಳಾ ನಿರ್ವಾಹಕಿಯರೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳುತ್ತಿದ್ದ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಗುಪ್ತಚರ) ಸಂಜಯ್ ಅಗರವಾಲ್ ಹೇಳಿದ್ದಾರೆ.

ಶಂಕಿತ ಗಂಗಾನಗರ ಜಿಲ್ಲೆಯ ಸೂರತ್‌ಗಢದಲ್ಲಿ ಸೇನೆ ಕಂಟೋನ್ಮೆಂಟ್‌ನ ಹೊರಗಡೆ ಸಮವಸ್ತ್ರದ ಅಂಗಡಿ ನಡೆಸುತ್ತಿದ್ದ ಎಂದು ಎಡಿಜಿಪಿ ತಿಳಿಸಿದ್ದಾರೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ನಡೆಸುತ್ತಿರುವ ಬೇಹುಗಾರಿಕಾ ಚುಟುವಟಿಕೆಗಳ ಮೇಲೆ ರಾಜಸ್ಥಾನದ ಗುಪ್ತಚರ ಇಲಾಖೆಯು ನಿರಂತರವಾಗಿ ನಿಗಾ ಇರಿಸುತ್ತಿದೆ ಎಂದು ಅವರು ಹೇಳಿದರು.

ಸ್ವಲ್ಪ ಸಮಯದವರೆಗೆ ಕೆಲಸವನ್ನು ಬಿಟ್ಟು ಬೆಹ್ರೋರ್ ಪ್ರದೇಶದಲ್ಲಿ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಶಂಕಿತ ವ್ಯಕ್ತಿ, ಪಾಕಿಸ್ತಾನಿ ಗುಪ್ತಚರ ಸಂಸ್ಥೆಯ ನಿರಂತರ ಸಂಪರ್ಕದಲ್ಲಿದ್ದನು ಎಂದು ಅವರು ಹೇಳಿದ್ದಾರೆ.

ವಿವಿಧ ಮೂಲಗಳಿಂದ ಸೇನೆಯ ಗೋಪ್ಯ ಮಾಹಿತಿಯನ್ನು ಪಡೆದು ಅದನ್ನು ಪಾಕಿಸ್ತಾನಿ ಏಜೆಂಟ್‌ಗಳೊಂದಿಗೆ ಹಂಚುತ್ತಿದ್ದ. ಇದಕ್ಕೆ ಪ್ರತಿಯಾಗಿ ಹಣದ ಬೇಡಿಕೆಯನ್ನು ಇರಿಸುತ್ತಿದ್ದ ಎಂದು ಎಡಿಜಿಪಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.