ನವದೆಹಲಿ: ‘ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿದ ಕೌನ್ಸೆಲಿಂಗ್ (ನೀಟ್–ಪಿಜಿ ಕೌನ್ಸೆಲಿಂಗ್) ವಿಳಂಬವಾಗುತ್ತಿರುವುದನ್ನು ಖಂಡಿಸಿ ಎರಡು ವಾರಗಳಿಂದ ಮುಷ್ಕರ ನಡೆಸುತ್ತಿದ್ದ ದೆಹಲಿಯ ವೈದ್ಯರು ಸರ್ಕಾರವು ಬೇಡಿಕೆಗಳನ್ನು ಈಡೇರಿಸುವ ಭರವಸೆ ಮೇರೆಗೆ ಶುಕ್ರವಾರ ಮುಷ್ಕರ ವಾಪಸ್ ಪಡೆದಿದ್ದಾರೆ’ ಎಂದು ಸ್ಥಾನಿಕ ವೈದ್ಯರ ಸಂಘಗಳ ಒಕ್ಕೂಟ (ಎಫ್ಒಆರ್ಡಿಎ) ತಿಳಿಸಿದೆ.

‘ಗುರುವಾರ ಸಂಜೆ ಸ್ಥಾನಿಕ ವೈದ್ಯರ ಸಂಘದ ಪ್ರತಿನಿಧಿಗಳೊಂದಿಗೆ ನಡೆದ ವರ್ಚುವಲ್ ಸಭೆಯಲ್ಲಿ ಡಿ. 31ರಂದು ಮುಷ್ಕರ ವಾಪಸ್ ಪಡೆಯುವ ಕುರಿತು ವಿವರವಾಗಿ ಚರ್ಚಿಸಲಾಯಿತು. ಶುಕ್ರವಾರ ಮಧ್ಯಾಹ್ನ 12ರ ವೇಳೆಗೆ ಮುಷ್ಕರವನ್ನು ಹಿಂಪಡೆಯಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು’ ಎಂದು ಎಫ್ಒಆರ್ಡಿಎ ಮಾಹಿತಿ ನೀಡಿದೆ.

ಒಕ್ಕೂಟದ ಪ್ರತಿನಿಧಿಗಳು ಮತ್ತು ಪೊಲೀಸರ ಜತೆಗೆ ಗುರುವಾರ ಸರಣಿ ಸಭೆಗಳೂ ನಡೆದಿದ್ದವು. ಮುಷ್ಕರದ ವೇಳೆ ಪೊಲೀಸರು ಮತ್ತು ವೈದ್ಯರು ಮುಖಾಮುಖಿಯಾದ ಸಂದರ್ಭದಲ್ಲಿ ಸಹೋದ್ಯೋಗಿ ವೈದ್ಯರ ವಿರುದ್ಧ ದಾಖಲಿಸಲಾದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವಂತೆ ಎಫ್ಒಆರ್ಡಿಎ ಕೋರಿತ್ತು.

ಜ. 6ರಂದು ಎಲ್ಲಾ ನಿವಾಸಿ ವೈದ್ಯರ ಸಂಘಗಳ ಪ್ರತಿನಿಧಿಗಳ ರಾಷ್ಟ್ರೀಯ ಸಭೆಯನ್ನು ಕರೆಯಲಾಗುವುದು ಎಂದೂ ಒಕ್ಕೂಟ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.