ನವದೆಹಲಿ: ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರದ ಉದ್ಘಾಟನೆ ಸಮಾರಂಭದ ಸಂದರ್ಭದಲ್ಲಿ ಮಸೀದಿಗಳು, ದರ್ಗಾಗಳು ಮತ್ತು ಮದರಸಾಗಳಲ್ಲಿ ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್ ಎಂಬ ನಾಮ ಜಪಿಸುವಂತೆ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್ ಮುಸ್ಲಿಮರಿಗೆ ಮನವಿ ಮಾಡಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಶೇ 99ರಷ್ಟು ಮುಸ್ಲಿಮರು ಮತ್ತು ಇತರ ಹಿಂದೂಯೇತರರು ದೇಶಕ್ಕೆ ಸೇರಿದವರು.‘ನಮ್ಮೆಲ್ಲರ ಪೂರ್ವಜರು ಸಹ ಒಂದೇ. ಅವರು ತಮ್ಮ ಧರ್ಮವನ್ನು ಬದಲಾಯಿಸಿದ್ದಾರೆ, ದೇಶವನ್ನಲ್ಲ’ ಎಂದು ಅವರು ಹೇಳಿದ್ದಾರೆ.

ಇಸ್ಲಾಂ, ಕ್ರಿಶ್ಚಿಯನ್, ಸಿಖ್ ಅಥವಾ ಇನ್ನಾವುದೇ ಧರ್ಮಕ್ಕೆ ಸೇರಿದ ಜನರು ಶಾಂತಿ, ಸೌಹಾರ್ದತೆ ಮತ್ತು ಭ್ರಾತೃತ್ವಕ್ಕಾಗಿ ತಮ್ಮ ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆರ್‌ಎಸ್‌ಎಸ್ ನಾಯಕ ಮನವಿ ಮಾಡಿದರು.

‘ರಾಮ್ ಮಂದಿರ್, ರಾಷ್ಟ್ರ ಮಂದಿರ್– ಎ ಕಾಮನ್ ಹೆರಿಟೇಜ್’ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರ್‌ಎಸ್‌ಎಸ್-ಸಂಯೋಜಿತ ಮುಸ್ಲಿಂ ರಾಷ್ಟ್ರೀಯ ಮಂಚ್‌ನ(ಎಂಆರ್‌ಎಂ) ಮುಖ್ಯ ಪೋಷಕರೂ ಆಗಿರುವ ಕುಮಾರ್, ನಮಗೆ ಸಾಮಾನ್ಯ ಪೂರ್ವಜರು, ಸಾಮಾನ್ಯ ಮುಖಗಳು ಮತ್ತು ಸಾಮಾನ್ಯ ಕನಸಿನ ಗುರುತಿದೆ. ನಾವೆಲ್ಲರೂ ಈ ದೇಶಕ್ಕೆ ಸೇರಿದವರು, ನಮಗೆ ವಿದೇಶಿಯರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

‘ಎಂಆರ್‌ಎಂ ಈಗಾಗಲೇ ಮುಸ್ಲಿಮರಿಗೆ ಮನವಿ ಮಾಡಿದೆ. ನಾನು ಇಂದು ಅದನ್ನು ಪುನರುಚ್ಚರಿಸುತ್ತಿದ್ದೇನೆ. ದರ್ಗಾಗಳು, ಮದರಸಾಗಳು ಮತ್ತು ಮಸೀದಿಗಳಲ್ಲಿ 11 ಬಾರಿ 'ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್' ಎಂದು ಜಪಿಸುವಂತೆ ಮನವಿ ಮಾಡಿ ಎಂದು ಹೇಳಿದ್ದಾರೆ.

‘ಗುರುದ್ವಾರಗಳು, ಚರ್ಚ್‌ಗಳು ಮತ್ತು ಎಲ್ಲಾ ಧಾರ್ಮಿಕ ಸ್ಥಳಗಳಿಗೆ ನಾನು ಮನವಿ ಮಾಡುವುದೇನೆಂದರೆ, ಜನವರಿ 22ರಂದು ತಮ್ಮ ಧಾರ್ಮಿಕ ಮಂದಿರಗಳನ್ನು ಸಿಂಗರಿಸಿ ಪ್ರಾರ್ಥನೆ ಸಲ್ಲಿಸಿ. ಟಿವಿಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವೀಕ್ಷಿಸಿ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.