ರಾಂಚಿ: ವಿಧಾನಸೌಧದ ಹೊರಗೆ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಜಾರ್ಖಂಡ್ ಸಚಿವ ಸಿ.ಪಿ.ಸಿಂಗ್, ಮುಸ್ಲಿಂ ಶಾಸಕರೊಬ್ಬರಲ್ಲಿ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಅವರಲ್ಲಿ ಸಿ.ಪಿ.ಸಿಂಗ್ ಅವರು, ಇರ್ಫಾನ್ ಭಾಯ್, ಗಟ್ಟಿಯಾಗಿ ಜೈ ಶ್ರೀರಾಮ್ ಎಂದು ಕೂಗಿ ಎಂದು ಹೇಳುತ್ತಿದ್ದಾರೆ. ಆಮೇಲೆ ನಿಮ್ಮ ಪೂರ್ವಜರು ರಾಮನ ಮೂಲದವರು ಬಾಬುರ್ ಮೂಲದವರು ಅಲ್ಲ ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.ಗುರುವಾರ ಮಾತುಕತೆ ನಡೆದಿದ್ದು ವಿಡಿಯೊ ಬಗ್ಗೆ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವಿಡಿಯೊದಲ್ಲೇನಿದೆ?
ನೀವು ರಾಮನ ಹೆಸರು ಹೇಳಿ ಭಯಪಡಿಸುತ್ತಿದ್ದೀರಿ.ನೀವು ರಾಮನ ಹೆಸರನ್ನು ಕೆಡಿಸುತ್ತಿದ್ದೀರಿ.ಈ ಹೊತ್ತಿನ ಅವಶ್ಯಕತೆ ಉದ್ಯೋಗ, ವಿದ್ಯುತ್, ನೀರು ಮತ್ತು ಚರಂಡಿ ವ್ಯವಸ್ಥೆ ಎಂದು ಅನ್ಸಾರಿ ಹೇಳುತ್ತಿದ್ದಾರೆ.

ನಿಮ್ಮನ್ನು ಭಯ ಪಡಿಸುವುದಕ್ಕಾಗಿ ನಾನು ಇದನ್ನು ಹೇಳುತ್ತಿಲ್ಲ.ನಿಮ್ಮ ಪೂರ್ವಜರು ಜೈ ಶ್ರೀರಾಮ್ ಅಂದಿದ್ದರು.ತೈಮೂರ್, ಬಾಬೂರ್, ಘಜನಿ ನಿಮ್ಮ ಪೂರ್ವಜರಲ್ಲ.ನಿಮ್ಮ ಪೂರ್ವಜರು ಶ್ರೀರಾಮನ ಅನುಯಾಯಿಗಳಾಗಿದ್ದರು ಎಂದು ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:'ಜೈ ಶ್ರೀರಾಮ್'ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಿದೆ: ಮೋದಿಗೆ ಪತ್ರ

ಜಾರ್ಖಂಡ್ನ ಬಿಜೆಪಿ ನೇತೃತ್ವದ ಸಿ.ಪಿ. ಸಿಂಗ್ ಅವರು ನಗರಾಭಿವೃದ್ಧಿ, ವಸತಿ ಮತ್ತು ಸಾರಿಗೆ ಸಚಿವರಾಗಿದ್ದಾರೆ. ಇರ್ಫಾನ್ ಅನ್ಸಾರಿ ಅವರು ಜಮ್ತಾರಾ ಚುನಾವಣಾ ಕ್ಷೇತ್ರದ ಶಾಸಕರಾಗಿದ್ದಾರೆ.

ಆದಾಗ್ಯೂ, ಈ ವಿಡಿಯೊವನ್ನು ತಪ್ಪಾಗಿ ಅರ್ಥೈಸಲಾಗಿದೆ.ಅದೊಂದು ಹಾಸ್ಯದ ಮಾತುಕತೆ ಆಗಿತ್ತು ಎಂದು ರಾಜ್ಯದ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ದ್ವೇಷ ಕೃತ್ಯ ಪ್ರಕರಣ ಸಂತ್ರಸ್ತರಲ್ಲಿ ಬಹುಪಾಲು ಅಲ್ಪ ಸಂಖ್ಯಾತರು ಮತ್ತು ದಲಿತರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.