ಕಾರ್ಯಾಂಗವು ನ್ಯಾಯಾಧೀಶನಂತೆ ವರ್ತಿಸಿ, ವ್ಯಕ್ತಿಯೊಬ್ಬ ಆರೋಪಿ ಎಂಬ ಕಾರಣಕ್ಕೆ ಆತನ ಮನೆ ಉರುಳಿಸುವ ಶಿಕ್ಷೆಯನ್ನು ವಿಧಿಸಿದರೆ, ಅದು ಅಧಿಕಾರವನ್ನು ಪ್ರತ್ಯೇಕಿಸುವ ತತ್ವಕ್ಕೆ ವಿರುದ್ಧ. ಅಧಿಕಾರಿಗಳು ಸಹಜ ನ್ಯಾಯದ ಮೂಲಭೂತ ತತ್ವಗಳನ್ನು ಪಾಲಿಸದೆ, ಸಹಜ ಪ್ರಕ್ರಿಯೆಯ ತತ್ವಕ್ಕೆ ಅನುಗುಣವಾಗಿ ವರ್ತಿಸದೆ, ಬುಲ್ಡೋಜರ್ ಬಳಸಿ ಕಟ್ಟಡವನ್ನು ಧ್ವಂಸಗೊಳಿಸುವ ಭೀತಿಯ ದೃಶ್ಯವು ಕಾನೂನಿಗೆ ಬೆಲೆಯೇ ಇಲ್ಲದ, ಬಲಿಷ್ಠನು ಮಾಡಿದ್ದೆಲ್ಲವೂ ಸರಿ ಎನ್ನುವ ಸ್ಥಿತಿಯನ್ನು ನೆನಪಿಸುತ್ತದೆ.