ನವದೆಹಲಿ: ಪಶ್ಚಿಮ ಬಂಗಾಳಮದರಸಾ ಸೇವಾ ಆಯೋಗ ಕಾಯ್ದೆ 2008 ಕ್ರಮಬದ್ಧವಾಗಿದ್ದು, ಈ ಕಾಯ್ದೆ ಪ್ರಕಾರ ಶಿಕ್ಷಕರ ಆಯ್ಕೆ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಎಂದು ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಯು.ಯು.ಲಲಿತ್ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಅಲ್ಲದೆ, ಮದರಸಾ ಆಯೋಗ ಕಾಯ್ದೆ 2008 ಅಸಂವಿಧಾನಿಕವಾಗಿದ್ದು, ಸಂವಿಧಾನಬದ್ಧವಾದ ಸಿಂಧುತ್ವ ಹೊಂದಿಲ್ಲ ಎಂದುಕೊಲ್ಕತ್ತಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದು ಮಾಡಿದೆ. ಮದರಸಾ ವ್ಯವಸ್ಥಾಪನಾ ಮಂಡಳಿ ಆಯ್ಕೆ ಮಾಡಿದ್ದ ಉದ್ಯೋಗಗಳು ಸಿಂಧುತ್ವ ಹೊಂದಿವೆ. ಕಾಯ್ದೆ ಪ್ರಕಾರ ಮದರಸಾಗಳಿಗೆ ಶಿಕ್ಷಕರಆಯ್ಕೆಯನ್ನೂ ಆಯೋಗವೇ ನಿರ್ಧರಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಪಶ್ಚಿಮ ಬಂಗಾಳದಲ್ಲಿ ಚಾಲ್ತಿಯಲ್ಲಿರುವ ಮದರಸಾ ಸೇವಾ ಆಯೋಗ 2008 ಅಸಂವಿಧಾನಿಕವಾಗಿದ್ದು, ಯಾವುದೇ ಸಿಂಧುತ್ವ ಹೊಂದಿಲ್ಲ. ಅಲ್ಲದೆ, ಪಶ್ಚಿಮ ಬಂಗಾಳ ಸರ್ಕಾರವೇಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಹಾಗೂ ಎಲ್ಲಾ ನೆರವು ನೀಡುತ್ತಿದೆ. ಈ ಕಾರಣದಿಂದ ಸರ್ಕಾರವೇ ಮದರಸಾಗಳಿಗೆ ಶಿಕ್ಷಕರನ್ನು ಆಯ್ಕೆ ಮಾಡಲು ನಿಯಮ ರೂಪಿಸಬೇಕು ಎಂದು ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಹಲವರು ಅರ್ಜಿಸಲ್ಲಿಸಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್, ಪಶ್ಚಿಮ ಬಂಗಾಳ ಮದರಸಾ ಸೇವಾ ಆಯೋಗ 2008 ಅಸವಿಂಧಾನಿಕವಾಗಿದ್ದು, ಇದು ಸಂವಿಧಾನದ ಆರ್ಟಿಕಲ್ 30ರ ಸ್ಪಷ್ಪ ಉಲ್ಲಂಘನೆಯಾಗಿದೆ. ಆರ್ಟಿಕಲ್ 30ರಲ್ಲಿ ಎಲ್ಲಾ ಅಲ್ಪಸಂಖ್ಯಾತ ಸಂಸ್ಥೆಗಳು ಅವರ ಆಡಳಿತವನ್ನು ಅವರೇ ನಿರ್ವಹಿಸುವ ಅಧಿಕಾರ ಹೊಂದಿವೆ ಎಂದು ಹೇಳಿತ್ತು.

ಮದರಸಾ ಸೇವಾ ಆಯೋಗ ಕಾಯ್ದೆ 2008ರ ಅನ್ವಯ ಆಯ್ಕೆಯಾಗಿದ್ದ ಶಿಕ್ಷಕರುಕೊಲ್ಕತ್ತಾ ಹೈಕೋರ್ಟ್‌ನ ಈ ತೀರ್ಪುಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿಮೇಲ್ಮನವಿ ಸಲ್ಲಿಸಿದ್ದರು. ಎಲ್ಲಾ ಅರ್ಜಿದಾರರ ಮನವಿಯವನ್ನು ಪುರಸ್ಕರಿಸಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿ, ಶಿಕ್ಷಕರನ್ನು ಸೇವೆಯಿಂದ ವಜಾ ಮಾಡಬಾರದು ಎಂದು ಆದೇಶ ನೀಡಿದೆ.

ಸುಪ್ರೀಂಕೋರ್ಟ್ ತೀರ್ಪಿನಿಂದ ಮದರಸಾ ಶಿಕ್ಷಕರು ವಜಾ ಆಗುವ ಅಪಾಯದಿಂದಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.