ಚಂಡೀಗಡ: ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದಂತೆ ಮೂರು ಪರಿಷ್ಕೃತ ಮಸೂದೆಗಳನ್ನು ಸಂಸತ್ತಿನ ಮಂಡಿಸಿದ ವೇಳೆ ಪ್ರತಿಪಕ್ಷಗಳು ನೆಪಗಳನ್ನು ಮುಂದೊಡ್ಡಿ ಚರ್ಚೆಯನ್ನು ಬಹಿಷ್ಕರಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಇಲ್ಲಿ ಟೀಕಿಸಿದರು.

ಕೆಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಪ ರಾಷ್ಟ್ರಪತಿ ಅವರನ್ನು ಅಣಕಿಸಿದ ಬಗ್ಗೆಯೂ ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದರು.

‘ಮಸೂದೆಗಳ ಬಗ್ಗೆ ಪ್ರತಿಪಕ್ಷಗಳ ಸಂಸದರು ತಮ್ಮ ಅಭಿಪ್ರಾಯ ನೀಡಬೇಕೆಂದು ನಾನು ಬಯಸಿದ್ದೆ. ಆದರೆ ದುರದೃಷ್ಟಕರ. ಅವರು ಚರ್ಚೆಯನ್ನು ಬಹಿಷ್ಕರಿಸಿ ಸಂಸತ್ತಿನ ಹೊರಗೆ ಉಪರಾಷ್ಟ್ರಪತಿ ಅವರನ್ನು ಅಣಕಿಸಿದರು. ಇದಕ್ಕಿಂತ ಖಂಡನಾರ್ಹವಾದದ್ದು ಮತ್ತೊಂದಿಲ್ಲ’ ಎಂದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ‘ ಕಾಂಗ್ರೆಸ್ನಂತಹ ಪಕ್ಷದ ಪ್ರಮುಖ ನಾಯಕರೊಬ್ಬರು ಅಣಕವನ್ನು ವಿಡಿಯೊ ಮಾಡಿ ಗೇಲಿ ಮಾಡಿದರು. ಹಲವು ಸರ್ಕಾರಗಳು ಬರುತ್ತವೆ ಹೋಗುತ್ತವೆ. ಆದರೆ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಕಾಯ್ದುಕೊಳ್ಳಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.