ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದ ಸನಿಹದಲ್ಲಿ ಇರುವ ಹೋಂಸ್ಟೇ ಹಾಗೂ ಹೋಟೆಲ್ಗಳಿಗೆ ಚಾರ್ ಧಾಮ್ ಯಾತ್ರಿಕರು ಪ್ರಮುಖ ಗ್ರಾಹಕರು. ಇಲ್ಲಿನ ಹೋಂಸ್ಟೇಗಳು ಹಾಗೂ ಹೋಟೆಲ್ಗಳು ಕಳೆದ ಕೆಲವು ದಿನಗಳಿಂದ ಬೇರೆ ಬೇರೆ ಏಜೆನ್ಸಿಗಳ ಅಧಿಕಾರಿಗಳಿಗೆ ನೆಲೆಯಾಗಿವೆ.

41 ಕಾರ್ಮಿಕರ ರಕ್ಷಣೆಗೆ ಕಾರ್ಯ ಆರಂಭವಾದ ನಂತರದಲ್ಲಿ ಬೇರೆ ಬೇರೆ ಏಜೆನ್ಸಿಗಳ ಅಧಿಕಾರಿಗಳು ಇಲ್ಲಿನ ಹೋಂಸ್ಟೇ ಹಾಗೂ ಹೋಟೆಲ್ಗಳಲ್ಲಿ ಕೊಠಡಿ ಬಾಡಿಗೆಗೆ ಪಡೆದಿದ್ದಾರೆ. ಈ ಹೋಂಸ್ಟೇ ಹಾಗೂ ಹೋಟೆಲ್ಗಳಲ್ಲಿ ಹೆಚ್ಚಿನವು ಗಂಗೋತ್ರಿ ಮತ್ತು ಯಮುನೋತ್ರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ – 94ರಲ್ಲಿ ಇವೆ.

ರಾಜ್ಯ ಸರ್ಕಾರದ ಬಹುತೇಕ ಅಧಿಕಾರಿಗಳು ಅನಂತಂ ರೆಸಿಡೆನ್ಸಿಯಲ್ಲಿ ಉಳಿದುಕೊಂಡಿದ್ದಾರೆ. ಇದು ಸಿಲ್ಕ್ಯಾರಾ ಸುರಂಗದಿಂದ 12 ಕಿ.ಮೀ. ದೂರದಲ್ಲಿದೆ. ಉತ್ತರಕಾಶಿ ಜಿಲ್ಲೆಯ ಕನಿಷ್ಠ 10 ಹಳ್ಳಿಗಳಲ್ಲಿನ ಹೋಂಸ್ಟೇ ಹಾಗೂ ಹೋಟೆಲ್ಗಳನ್ನು ರಕ್ಷಣಾ ತಂಡಗಳ ಸದಸ್ಯರು, ಅಧಿಕಾರಿಗಳು ಬಳಸಿಕೊಳ್ಳುತ್ತಿದ್ದಾರೆ.

‘ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಆರು ತಿಂಗಳು ನಮಗೆ ವರಮಾನದ ದೃಷ್ಟಿಯಿಂದ ಬಹಳ ಒಳ್ಳೆಯ ಅವಧಿ. ಚಳಿಗಾಲದಲ್ಲಿ ನಾವು ಸುಮ್ಮನೆ ಕುಳಿತಿರುತ್ತೇವೆ. ಆದರೆ, ಈ ಬಾರಿ ಈ ರಕ್ಷಣಾ ಕಾರ್ಯವು ನಮಗೆ ಒಂದಿಷ್ಟು ಕೆಲಸ ನೀಡಿದೆ’ ಎಂದು ಬ್ರಹ್ಮಖಾಲ್ನಲ್ಲಿನ ಹೋಟೆಲ್ ಮಾಲೀಕ ಮನೀಶ್ ರಾವತ್ ತಿಳಿಸಿದರು.

ನವೆಂಬರ್ 12ರವರೆಗೆ ಹೋಟೆಲ್ನ ಎರಡು ಕೊಠಡಿಗಳು ಮಾತ್ರ ಭರ್ತಿಯಾಗಿದ್ದವು. ಆದರೆ ರಕ್ಷಣಾ ಕಾರ್ಯ ಆರಂಭವಾದ ನಂತರದಲ್ಲಿ ಹೋಟೆಲ್ನ ಅಷ್ಟೂ ಕೊಠಡಿಗಳು ಭರ್ತಿಯಾದವು ಎಂದು ಅನಂತಂ ಹೋಟೆಲ್ ಮಾಲೀಕ ನಿತೀಶ್ ರಮೋಲಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.