ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಅವರ ಸಂಪುಟದ ಕೆಲ ಸಹೋದ್ಯೋಗಿಗಳು ಗುರುವಾರ ಭಾಗವಹಿಸಿದರು. ಈ ಕೂಟಕ್ಕೆ ಪಕ್ಷದಿಂದ ಯಾರೂ ಭಾಗವಹಿಸಬಾರದು ಎಂದು ಡಿಎಂಕೆ ಸೇರಿದಂತೆ ಮೈತ್ರಿಕೂಟದ ಇತರ ಪಕ್ಷಗಳು ನಿರ್ಣಯ ಕೈಗೊಂಡಿದ್ದವು.

ರಾಜ್ಯಪಾಲರು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಾರೆ ಎಂದು ಆರೋಪಿಸಿ ಡಿಎಂಕೆ, ಕಾಂಗ್ರೆಸ್, ಸಿಪಿಎಂ, ಎಂಡಿಎಂಕೆ ಹಾಗೂ ಎಂಎಂಕೆ ಪಕ್ಷಗಳು ಕೂಟದಲ್ಲಿ ಪಾಲ್ಗೊಳ್ಳಬಾರದು ಎಂದು ನಿರ್ಧರಿಸಿದ್ದವು. ಆದರೆ, ಗುರುವಾರ ಮುಖ್ಯಮಂತ್ರಿ ಸ್ಟಾಲಿನ್, ಸ್ಪೀಕರ್ ಎಂ. ಅಪ್ಪವು ಹಾಗೂ ಜಲ ಸಂಪನ್ಮೂಲ ಸಚಿವ ದುರಾಯ್ ಮುರುಗನ್ ಅವರು ಕೂಟದಲ್ಲಿ ಭಾಗವಹಿಸಿದರು.

‘ಒಂದು ರಾಜಕೀಯ ಪಕ್ಷವಾಗಿ, ನಮಗೆ ರಾಜ್ಯಪಾಲರೊಂದಿಗೆ ಸಂಘರ್ಷ ಇರಬಹುದು. ಆದರೆ, ರಾಜ್ಯಪಾಲರ ಹುದ್ದೆಗೆ, ಅದರ ಘನತೆಗೆ ಧಕ್ಕೆ ಬಾರದ ಹಾಗೆ ನಮ್ಮ ನಡೆ ಇರಬೇಕು ಎನ್ನುವುದು ಮುಖ್ಯಮಂತ್ರಿ ಸ್ಟಾಲಿನ್ ಅವರ ನಂಬಿಕೆ. ಈ ಕಾರಣಕ್ಕಾಗಿಯೇ ಕೂಟದಲ್ಲಿ ಭಾಗವಹಿಸಲು ಸರ್ಕಾರ ನಿರ್ಧರಿಸಿತು’ ಎಂದು ಹಣಕಾಸು ಸಚಿವ ಥಂಗಂ ಥೆನ್ನರಸು ಮಾಹಿತಿ ನೀಡಿದರು. ಆದರೆ, ಸ್ಟಾಲಿನ್ ಅವರು ಕೂಟದಲ್ಲಿ ಭಾಗವಹಿಸಿರುವುದಕ್ಕೆ ಡಿಎಂಕೆ ಪಕ್ಷದಲ್ಲಿಯೇ ಭಿನ್ನಾಭಿಪ್ರಾಯ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.