ಆಗ್ರಾ: ವಿಶ್ವವಿಖ್ಯಾತ ಪ್ರವಾಸಿ ತಾಣ ತಾಜ್ಮಹಲ್ನ ಮುಖ್ಯಸಮಾಧಿ ಸ್ಥಳವನ್ನು ವೀಕ್ಷಿಸಬೇಕಾದರೆ ಇನ್ನುಮುಂದೆ ಹೆಚ್ಚುವರಿ ಹಣ ಪಾವತಿಸಬೇಕು. ತಾಜ್ ಪ್ರವೇಶ ಶುಲ್ಕವನ್ನು ಉತ್ತರ ಪ್ರದೇಶ ಸರ್ಕಾರ ₹250ಕ್ಕೆ ಹೆಚ್ಚಿಸಿದೆ.

₹50 ಶುಲ್ಕ ಪಾವತಿಸಿದವರಿಗೆ ಮುಖ್ಯ ಸಮಾಧಿಗೆ ಪ್ರವೇಶವಿಲ್ಲ. ತಾಜ್ನ ಹೊರ ಆವರಣದಲ್ಲಿ ಮಾತ್ರ ಓಡಾಡಬಹುದು.ಆಗ್ರಾದ ಪ್ರಾಚ್ಯವಸ್ತು ಇಲಾಖೆಯ ಮುಖ್ಯಸ್ಥ ವಸಂತ್ ಸಾವರ್ಕರ್ ಅವರು ಈ ಮಾಹಿತಿ ನೀಡಿದ್ದಾರೆ.

ವಿದೇಶಿಗರಿಗೆ ₹1300ಕ್ಕೆ ನಿಗದಿಪಡಿಸಲಾಗಿದೆ. ಆದರೆ ಸಾರ್ಕ್ ದೇಶಗಳ ಪ್ರವಾಸಿಗರು ₹740 ಪಾವತಿಸಿದರೆ ಸಾಕು.ದರ ಹೆಚ್ಚಳವು ಪ್ರವಾಸಿ ತಾಣದ ಮೇಲಿನ ಜನರ ಒತ್ತಡವನ್ನು ಕಡಿಮೆ ಮಾಡಲಿದೆ.

1938ರಲ್ಲಿ ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ತಾಜ್ ಅನ್ನು ಭಾರತದಲ್ಲಿ ಮುಸ್ಲಿಂ ಕಲೆಯ ಅನರ್ಘ್ಯರತ್ನ ಎಂದು ಬಣ್ಣಿಸಲಾಗಿದೆ. ಮೊಘಲ್ ವಾಸ್ತುಶಿಲ್ಪದ ಮಹೋನ್ನತ ಕಲಾಕೃತಿ ಎಂದೇ ಕರೆಯಲಾಗುವ ತಾಜ್ ವಿಶ್ವಪಾರಂಪರಿಕ ತಾಣಗಳಲ್ಲೇ ಅತ್ಯಂತ ಮಹತ್ವದ ತಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.